ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಪಾಲರನ್ನು ನೇಮಿಸಲು ಕಿರಣ್‍ಬೇಡಿ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Kiran-Bedi--01

ಪಾಂಡಿಚೇರಿ,ಏ.28- ಪಾಂಡಿಚೇರಿ ಮತ್ತು ಇತರೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಲು ಕೇಂದ್ರದಲ್ಲಿ ಸ್ವತಂತ್ರ ಲೋಕಪಾಲ್ ಸ್ಥಾಪಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಲೆಫ್ಟಿ ನೆಂಟ್ ಗೌರ್ನರ್ ಕಿರಣ್ ಬೇಡಿ ಆಗ್ರಹಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ವತಂತ್ರ ಜಾಗೃತ ದಳ ಇಲ್ಲ. ಹೀಗಾಗಿ ಲೋಕಪಾಲಕರನ್ನು ನೇಮಿಸಿ ಭ್ರಷ್ಟಾಚಾರವನ್ನು ತಡೆಗಟ್ಟುವ ಜತೆಗೆ ಸ್ವಜನಪಕ್ಷಪಾತವಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತದೆ ಎಂದರು.ಪಾಂಡಿಚೇರಿ ಹಾಗೂ ಇತರ ಕೇಂದ್ರಾಡಳಿತ ಪ್ರದೇಶಗಳ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಕಂಡುಬಂದಲ್ಲಿ ಸಾರ್ವಜನಿಕರು ಲೋಕಪಾಲಕರಿಗೆ ನೇರವಾಗಿ ದೂರು ನೀಡಬಹುದು. ಜತೆಗೆ ವಾಟ್ಸಪ್ ಸಂದೇಶದ ಮೂಲಕವೂ ಮಾಹಿತಿ ನೀಡಬಹುದು. ಹಾಗಾಗಿ ಕೇಂದ್ರಾಡಳಿತ ಪ್ರದೇಶಗಳಿಗೆ ಸ್ವತಂತ್ರ ಲೋಕಪಾಲ್ ಅತ್ಯವಶ್ಯಕ ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin