ಬಿಜೆಪಿ ಕಚೇರಿ ಮುಂದೆ ಈಶು-ಯಡ್ಡಿ ಕಾರ್ಯಕರ್ತರ ಕಿತ್ತಾಟ

ಈ ಸುದ್ದಿಯನ್ನು ಶೇರ್ ಮಾಡಿ

BJP-Office

ಬೆಂಗಳೂರು, ಏ.28- ಬಿಎಸ್ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಭಿನ್ನಮತದ ಬಿಸಿ ಈಗ ಕಾರ್ಯಕರ್ತರಿಗೂ ತಟ್ಟಿದೆ. ಇಂದು ಬಿಜೆಪಿ ಕಚೇರಿ ಮುಂದೆ ಕಾರ್ಯಕರ್ತರು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದರು. ಈಶ್ವರಪ್ಪ ವಿರುದ್ಧ ಮೇಲ್ಮನೆ ಸದಸ್ಯ ಪುಟ್ಟಸ್ವಾಮಿ ಅವರು ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಲಘುವಾಗಿ ಮಾತನಾಡಿದ್ದಾರೆ. ಕೂಡಲೇ ಅವರು ಕ್ಷಮೆಯಾಚಿಸಬೇಕೆಂದು ಈಶುಪರವಾದ ಕೆಲ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.ಈ ನಡುವೆ ಯಡಿಯೂರಪ್ಪ ಪರವಾಗಿ ನಿಂತಿದ್ದ ಕಾರ್ಯಕರ್ತರು ಸಹ ಅದಕ್ಕೆ ಪ್ರತಿಯಾಗಿ ಘೋಷಣೆಗಳನ್ನು ಕೂಗಿ ಕೆಲವರ ಜತೆ ವಾಗ್ವಾದಕ್ಕಿಳಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಎರಡೂ ಬಣಗಳ ಕಿತ್ತಾಟ ವಿಕೋಪಕ್ಕೆ ತಿರುಗುವ ಸಾಧ್ಯತೆ ಇದ್ದುದ್ದರಿಂದ ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನ ಪಡಿಸಿದರು.  ಕೆಲವರು ಕಚೇರಿ ಒಳಕ್ಕೆ ನುಗ್ಗಲು ಪ್ರಯತ್ನಿಸಿದಾಗ ಅದಕ್ಕೆ ಪ್ರತಿರೋಧ ಒಡ್ಡಲಾಯಿತು. ಕೆಲ ಕಾಲ ಇಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.  ನಿನ್ನೆ ನಾಯಕರ ನಡುವೆ ನಡೆದಿದ್ದ ವಾಕ್ಸಮರ ನಡೆದಿತ್ತು. ಆದರೆ ಇಂದು ಒಂದೇ ಪಕ್ಷದ ಕಾರ್ಯಕರ್ತರು ಪರಸ್ಪರ ಕಿತ್ತಾಡಿಕೊಂಡಿದ್ದು, ಸ್ಥಳೀಯರಿಗೆ ಮನರಂಜನೆಯಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin