ಬಿಜೆಪಿ ಭಿನ್ನಮತ ಕುರಿತು ಪ್ರತಿಕ್ರಿಯಿಸಲು ಅನಂತ್ ಕುಮಾರ್, ಸದಾನಂದಗೌಡ ನಕಾರ

ಈ ಸುದ್ದಿಯನ್ನು ಶೇರ್ ಮಾಡಿ

Anat-Kumar--01

ಬೆಂಗಳೂರು, ಏ.28-ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಾಭಿಪ್ರಾಯದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಕೇಂದ್ರ ಸಚಿವರಾದ ಅನಂತ್‍ಕುಮಾರ್ ಹಾಗೂ ಸದಾನಂದಗೌಡರು ನುಣುಚಿಕೊಂಡಿರುವ ಪ್ರಸಂಗ ಇಂದು ನಡೆದಿದೆ. ಸುದ್ದಿಗಾರರ ಮುಂದೆ ಈ ವಿಷಯ ಮಾತನಾಡಲು ಹಿಂಜರಿದ ಈ ಇಬ್ಬರು ಕೇಂದ್ರ ಸಚಿವರು ಪಕ್ಷದಲ್ಲಿನ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ್ದಾರೆ. ಇಂದು ಸಿರಿಧಾನ್ಯ ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈ ಇಬ್ಬರು ಸುದ್ದಿಗಾರರ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿ ಕಾರ್ಯಕ್ರಮ ಉದ್ಘಾಟನೆಗೆ ಬಂದಿದ್ದೇವೆ, ಅದಷ್ಟನ್ನೇ ಮಾಡುತ್ತೇವೆ.



ಬೇರೆ ಯಾವ ವಿಷಯವನ್ನೂ ಮಾತನಾಡುವುದಿಲ್ಲ ಎಂದು ಹೇಳಿದ ಅನಂತ್‍ಕುಮಾರ್, ಏನಾದರೂ ಹೇಳುವುದಿದ್ದರೆ ಸದಾನಂದಗೌಡರಿಗೆ ಕೇಳಿ ಎಂದರಲ್ಲದೆ, ಅವರೇ ನಮಗೆಲ್ಲ ಹಿರಿಯರು ಎಂದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ನಂತರ ಇದೇ ತಂತ್ರ ಅನುಸರಿಸಿದ ಸದಾನಂದಗೌಡರು, ಯಾವುದೇ ವಿಷಯ ಮಾತನಾಡುವುದಕ್ಕೆ ಪಕ್ಷದ ವಕ್ತಾರರಿದ್ದಾರೆ ಎಂದು ಪ್ರತಿಕ್ರಿಯಿಸಿ ಏನೂ ಉತ್ತರ ನೀಡಲಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin