ಸುಕ್ಮಾ ಹತ್ಯಾಕಾಂಡ : ಮತ್ತೊಬ್ಬ ನಕ್ಸಲೀಯನ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Sukma--01

ರಾಯ್‍ಪುರ್, ಏ.28-ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯ ಕಾಲಾಪತ್ಥರ್ ಎಂಬಲ್ಲಿ ನಕ್ಸಲೀಯರ ಕ್ರೌರ್ಯಕ್ಕೆ 25 ಯೋಧರು ಬಲಿಯಾದ ಸ್ಥಳದಲ್ಲಿ ನಿನ್ನೆ ರಾತ್ರಿ ಬಂಡುಕೋರನೊಬ್ಬನ ಶವ ಪತ್ತೆಯಾಗಿದೆ. ಇದರೊಂದಿಗೆ ಎನ್‍ಕೌಂಟರ್‍ನಲ್ಲಿ ಹತರಾದ ಮಾವೋವಾದಿಗಳ ಸಂಖ್ಯೆ 12ಕ್ಕೇರಿದೆ.  ಛತ್ತೀಸ್‍ಗಢದ ದಕ್ಷಿಣ ಬಸ್ತರ್ ಪ್ರಾಂತ್ಯದ ಸುಕ್ಮಾ ಜಿಲ್ಲೆ ಕಾಲಾಪತ್ಥರ್ ಬಳಿ ಸುಮಾರು 300 ನಕ್ಸಲರು ಸಿಆರ್‍ಪಿಎಫ್‍ನ ಗಸ್ತು ಪಡೆಯಲ್ಲಿದ್ದ ಸುಮಾರು 99 ಯೋಧರ ಮೇಲೆ ದಾಳಿ ನಡೆಸಿದರು.   ಈ ಹತ್ಯಾಕಾಂಡದಲ್ಲಿ 25 ಸೈನಿಕರು ಮೃತಪಟ್ಟಿದ್ದರು. ಸಿಆರ್‍ಪಿಎಫ್ ನಡೆಸಿದ ಮರುದಾಳಿಯಲ್ಲಿ ಸುಮಾರು 11 ನಕ್ಸಲರು ಹತರಾಗಿದ್ದರು.ಯೋಧರ ಮೃತ್ಯುಕೂಪ ಸುಕ್ಮಾ : ಸುಕ್ಮಾ ಜಿಲ್ಲೆಯ ದಟ್ಟಡವಿ ನಕ್ಸಲರ ಅಡುಗುತಾಣವಾಗಿದ್ದು, ಅಗಾಗ ಪೊಲೀಸರು ಮತ್ತು ಯೋಧರ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin