ಹುಟ್ಟುಹಬ್ಬದಂದೇ ಮಹಡಿಯಿಂದ ಬಿದ್ದು ಬಾಲಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Baby--01

ಬೆಂಗಳೂರು, ಏ.28-ಹುಟ್ಟುಹಬ್ಬದಂದೇ 2 ವರ್ಷದ ಬಾಲಕನೊಬ್ಬ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಸುಬ್ರಹ್ಮಣ್ಯ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜಾಜಿನಗರ ಇ ಬ್ಲಾಕ್ ನಿವಾಸಿ ಮನೀಷ್(2) ಹುಟ್ಟುಹಬ್ಬದಂದೇ ಮೃತಪಟ್ಟ ನತದೃಷ್ಟ ಬಾಲಕ. ಪೋಷಕರು 3ನೆ ಮಹಡಿ ಮನೆಯಲ್ಲಿ ವಾಸವಿದ್ದಾರೆ. 4ನೆ ಮಹಡಿಯಲ್ಲಿ ಅರ್ಧ ಜಾಗ ಖಾಲಿ ಬಿಟ್ಟು ಕೊಠಡಿ ನಿರ್ಮಿಸಲಾಗಿದೆ. ನಿನ್ನೆ ಮನೀಷ್‍ಗೆ 2ನೆ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮನೆಗೆ ಸಂಬಂಧಿಕರು ಬಂದಿದ್ದು, ಮನೆಯವರೆಲ್ಲ ಬರ್ತ್‍ಡೇ ಪಾರ್ಟಿ ತಯಾರಿಯಲ್ಲಿ ತೊಡಗಿದ್ದಾರೆ.



ಸಂಬಂಧಿಕರ ಮಕ್ಕಳ ಜತೆ 4ನೆ ಮಹಡಿಗೆ ಹೋಗಿ ಆಟವಾಡುತ್ತಿದ್ದ ಮನೀಷ್ ಆಯತಪ್ಪಿ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಘಟನೆಯಿಂದ ಬರ್ತ್‍ಡೇ ಸಂಭ್ರಮಕ್ಕೆ ಸಿದ್ಧವಾಗುತ್ತಿದ್ದ ಮನೆ ಸೂತಕದ ಮನೆಯಾಗಿ ಪರಿಣಮಿಸಿದೆ. ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆ ಸಂಬಂಧ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin