ಉತ್ತರ ಕರ್ನಾಟಕ ಭಾಗದಲ್ಲಿ 50ಸ್ಥಾನ ಗೆಲ್ಲುವ ಗುರಿ : ಎಚ್‍ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--01

ಹುಬ್ಬಳ್ಳಿ, ಏ.29- ಮುಂಬರುವ ವಿಧಾನಸಭೆ ಚುನಚಾಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 45ರಿಂದ 50 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.  ನಗರದ ಬಸವವೃತ್ತದಲ್ಲಿ ಏರ್ಪಡಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ, ನಮ್ಮ ಪಕ್ಷದ ಹಿರಿಯ ಮುಖಂಡ ಬಸವರಾಜಹೊರಟ್ಟಿ ಅವರ ನೇತೃತ್ವದಲ್ಲಿ ಈ ಭಾಗದಲ್ಲಿ 45ರಿಂದ 50 ಸ್ಥಾನ ಗೆಲ್ಲುವ ಗುರಿ ಇದೆ. ಇದನ್ನು ಈಡೇರಿಸಲು ಈಗಿನಿಂದಲೇ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.ಉತ್ತರ ಕರ್ನಾಟಕ ಭಾಗದ ಹಾವೇರಿ, ಗದಗ, ಬಾಗಲಕೋಟೆ, ಧಾರವಾಡ ಮತ್ತಿತರ ಜಿಲ್ಲೆಗಳಲ್ಲಿ ಈಗಾಗಲೇ ವಿಧಾನಸಭಾವಾರು ಸಭೆಗಳನ್ನು ನಡೆಸಿದ್ದೇವೆ. ಈ ಸಮಯದಲ್ಲಿ ನಮ್ಮ ಪಕ್ಷಕ್ಕ ಬೇರೆ ಪಕ್ಷಗಳ ಮುಖಂಡರು, ನಾಯಕರು ಸೇರ್ಪಡೆಗೊಂಡಿದ್ದಾರೆ. ಎಲ್ಲರಲ್ಲೂ ಪಕ್ಷ ಸಂಘಟನೆ ಮಾಡುವ ಉತ್ಸಾಹ ಎದ್ದು ಕಾಣುತ್ತಿದೆ ಎಂದರು. ಈ ಭಾಗದ ನಾಯಕರ ಅಭಿಪ್ರಾಯ ಗಮನಿಸಿದಾಗ ಅವರಲ್ಲಿನ ವಿಶ್ವಾಸ ಕಂಡು ನಾನು ನನ್ನ ಗುರಿ ಮುಟ್ಟುತ್ತೇನೆ ಎಂಬ ವಿಶ್ವಾಸ ಉಂಟಾಗಿದೆ. ಮೇ 11,12,13ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ ಮೇ 6ರಂದು ಚಿಕ್ಕೋಡಿ ತಾಲ್ಲೂಕಿನ ಸದಲಗದಲ್ಲಿ ಜೆಡಿಎಸ್ ಸಮಾವೇಶವನ್ನು ಹಮ್ಮಿಕೊಂಡಿದ್ದೇವೆ. ಒಟ್ಟಾರೆ ಮೇ ತಿಂಗಳು ಉತ್ತರ ಕರ್ನಾಟಕಕ್ಕೆ ಮೀಸಲಿಟ್ಟು ಪಕ್ಷ ಸಂಘಟನೆ ಹಾಗೂ ಮುಂಬರುವ ವಿಧಾನಸಭೆಯಲ್ಲಿ ಹೆಚ್ಚು ಸ್ಥಾನವನ್ನು ಗಳಿಸಲು ಶ್ರಮಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಹಾರಹಾಕಲು ಸೀಮಿತವಾಗುವುದು ಬೇಡ:

ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಅತ್ಯಂತ ಮಾನವತಾವಾದಿ, ವಿಚಾರವಾದಿ, ಸಮಾಜದ ಪತಿವರ್ತನೆಗೆ ದೊಡ್ಡ ಕ್ರಾಂತಿ ಮಾಡಿದ ಬಸವೇಶ್ವರರ ಜಯಂತಿಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಕೇವಲ ಅವರ ಭಾವಚಿತ್ರ ಹಾಗೂ ಪ್ರತಿಮೆಗೆ ಹಾರ ಹಾಕುವುದಕ್ಕೆ ಜಯಂತಿ ಸೀಮಿತವಾಗಬಾರದು. ಅವರ ಸಂದೇಶ, ಮಾರ್ಗದರ್ಶನಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯತತ್ಪರರಾಗಿ ಸಮಾಜಕ್ಕೆ ಕೊಡುಗೆ ಕೊಟ್ಟರೆ ಅದೇ ನಾವು ಬಸವಣ್ಣನವರಿಗೆ ಸಲ್ಲಿಸುವ ಗೌರವ ಎಂದು ನುಡಿದರು.  ಬಸವಣ್ಣನವರ ಜಯಂತಿಯನ್ನು ಅರ್ಥಗರ್ಭಿತವಾಗಿ ಆಚರಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಾವೆಲ್ಲ ತೊಡಗಿದರೆ ಸಮಾಜದ ಬಹುತೇಕ ನೂನ್ಯತೆಗಳನ್ನು ಹೋಗಲಾಡಿಸಬಹುದು ಎಂದು ತಿಳಿಸಿದರು.  ಪರಿವರ್ತನೆಯ ಕ್ರಾಂತಿ ಮಾಡಿದ ಬಸವಣ್ಣನವರ ಸಂದೇಶಗಳನ್ನು ನಾವೆಲ್ಲ ಪಾಲಿಸೋಣ ಎಂದು ಕುಮಾರಸ್ವಾಮಿ ಕರೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin