ಘಾಜಿಯಾಬಾದ್‍ನಲ್ಲಿ ಪಟಾಕಿ ಗೋದಾಮು ಸ್ಪೋಟಗೊಂಡು ಐವರ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Fire--01

ಘಾಜಿಯಾಬಾದ್, ಏ.29-ಪಟಾಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ಆನಂತರ ಸಂಭವಿಸಿದ ಸ್ಫೋಟದ ದುರಂತದಲ್ಲಿ ಐವರು ಸಜೀವ ದಹನವಾಗಿ ಅನೇಕರು ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್‍ನ ಸಾಹಿಬಾಬಾದ್‍ನಲ್ಲಿರುವ ಫಾರೂಕ್‍ನಗರದಲ್ಲಿ ನಡೆದಿದೆ. ಕಾರ್ಮಿಕನೊಬ್ಬ ಸೇದಿ ಎಸೆದ ಬೀಡಿಯಿಂದ ಬೆಂಕಿ ಹೊತ್ತಿಕೊಂಡು ಗೋದಾಮಿನಲ್ಲಿ ದಾಸ್ತಾನು ಇಡಲಾಗಿದ್ದ ಪಟಾಕಿಗಳು ಸ್ಫೋಟಗೊಂಡವು. ಈ ದುರ್ಘಟನೆಯಲ್ಲಿ ಗೋದಾಮಿನ ಮಾಲೀಕ ಪಪ್ಪು, ನೌಕರರಾದ ಅಷ್ಪಾಕ್, ರಫೀಕ್, ಸಗೀರ್ ಮತ್ತು ಕುತುಬುದ್ದೀನ್ ಸುಟ್ಟು ಕರಕಲಾಗದರು.



ಬೆಂಕಿ ಮತ್ತು ಸ್ಫೋಟದ ಸುದ್ದಿ ತಿಳಿದು 10 ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಹಲವು ಗಂಟೆಗಳ ಕಾಲ ಶ್ರಮಿಸಿ ಅಗ್ನಿ ಪ್ರಕೋಪ ನಿಯಂತ್ರಿಸಿದರು.
ಪಟಾಕಿಗಳನ್ನು ಸಂಗ್ರಹಿಸಿಡಲು ಈ ಗೋದಾಮಿನಲ್ಲಿ ಅಗತ್ಯ ಅನುಮತಿ ಇರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin