ತಾಪಂ ಸದಸ್ಯ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ, ಏ.29- ಜಿಲ್ಲೆಯ ಸೇಡಂ ತಾಲ್ಲೂಕಿನ ಕೊಂಕನಹಳ್ಳಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ತಾಪಂ ಸದಸ್ಯ ದುರ್ಮರಣಕ್ಕೀಡಾಗಿದ್ದಾರೆ.ಬೈಕ್‍ನಲ್ಲಿ ಹೋಗುತ್ತಿದ್ದ ತೆಲಕ್ಕೂರು ಕ್ಷೇತ್ರದ ತಾಪಂ ಸದಸ್ಯ ಸಿದ್ದಪ್ಪ ಮದ್ದೂರು(40) ಎಂಬುವರಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ. ರಸ್ತೆಗೆ ಉರುಳಿದ ಅವರು ತೀವ್ರವಾಗಿ ಗಾಯಗೋಂಡು ಸ್ಥಳದಲ್ಲೇ ಅಸುನೀಗಿದ್ದಾರೆ. ಇದೇ ವೇಳೆ ಸಿದ್ದಪ್ಪ ಅವರ ಜತೆಗಿದ್ದ ಉದಯ್ ಎಂಬುವರ ಮೇಲೆ ಕಾರು ಹರಿದಿದ್ದು, ಅವರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಲಬುರಗಿಗೆ ತೆರಳಿದ್ದ ಇವರು ವಾಪಸ್ ಸೇಡಂಗೆ ಬರುವಾಗ ಈ ದುರ್ಘಟನೆ ನಡೆದಿದ್ದು, ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin