ಮಾದಕ ವಸ್ತು ಮಾರುತ್ತಿದ್ದ ನೈಜೀರಿಯಾ ಪ್ರಜೆಗಳಿಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

nigeria

ಬೆಂಗಳೂರು, ಏ.29- ಮನೆಯೊಂದರಲ್ಲಿ ಮಾದಕ ವಸ್ತು ಮಾರುತ್ತಿದ್ದ ನೈಜೀರಿಯಾ ಪ್ರಜೆಗಳಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೋಗಿಲು ಮುಖ್ಯರಸ್ತೆ, ಮಾರುತಿನಗರ ವಾಸಿಗಳಾದ ಚುಕ್ವುನೊನ್ಸೊ ಅಲಿಯಾಸ್ ಒಗೊನೊಗೊ ಅಲಿಯಾಸ್ ಕೆವಿನ್ ಅಬುಮೆದೆ ಒಯಲೊ (41) ಮತ್ತು ಫ್ರಾಂಕ್ ಒನ್ಯೆಡಿಕಚಿ (34) ಬಂಧಿತ ನೈಜೀರಿಯಾ ಪ್ರಜೆಗಳು.ಬಂಧಿತರಿಂದ 1.25 ಲಕ್ಷ ರೂ. ಮೌಲ್ಯದ 6.10 ಗ್ರಾಂ ಕೊಕೇನ್, 1.5 ಗ್ರಾಂ ಎಂಡಿಎಂಎ, 4 ಎಲ್‍ಎಸ್‍ಡಿ ಪೇಪರ್, 4 ಮೊಬೈಲ್, ಎರಡು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.ಅನಧಿಕೃತವಾಗಿ ಭಾರತದಲ್ಲಿ ನೆಲೆಸಿರುವ ಇಬ್ಬರು ಸುಳ್ಳು ದಾಖಲೆ ಸೃಷ್ಟಿಸಿ ಪಡೆದ ಸಿಮ್‍ಕಾರ್ಡ್ ಬಳಸಿಕೊಂಡು ಮಾದಕ ವಸ್ತು ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.



ಖಚಿತ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಬ್ಬರು ಆರೋಪಿಗಳ ವಿರುದ್ಧ ಕೆಆರ್ ಪುರಂ ಠಾಣೆಯಲ್ಲೂ ಮಾದಕ ವಸ್ತು ಮಾರಾಟ ಪ್ರಕರಣ ದಾಖಲಾಗಿದ್ದು, ಒಗೊನೊಗೊ ತಲೆಮರೆಸಿಕೊಂಡಿದ್ದರೆ, ಫ್ರಾಂಕ್ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದು ಮತ್ತೆ ಅದೇ ದಂಧೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin