ವಿವಾಹ ಸಮಾರಂಭದಲ್ಲಿ ಸಜ್ಜಾ ಕುಸಿದು 9 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

9Killed--01

ಜೈಪುರ, ಏ.29-ಮದುವೆ ಸಮಾರಂಭವೊಂದರಲ್ಲಿ ಸಜ್ಜಾ ಕುಸಿದು ಒಂಭತ್ತು ಮಂದಿ ಮೃತಪಟ್ಟು, ಇತರ 15 ಜನ ಗಾಯಗೊಂಡಿರುವ ಘಟನೆ ರಾಜಸ್ತಾನದ ಭರತ್‍ಪುರ್ ಜಿಲ್ಲೆಯಲ್ಲಿ ನಡೆದಿದೆ. ಕುಮ್ಹೇರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಧಿ ಗ್ರಾಮದಲ್ಲಿ, ವಿವಾಹದ ಸಂದರ್ಭದಲ್ಲಿ ನಡೆಯುವ ಭಾತ್ ಆಚರಣೆ ವೇಳೆ ಈ ದುರಂತ ಸಂಭವಿಸಿದೆ. ಸಮಾರಂಭ ವೀಕ್ಷಿಸಲು ಜನರ ಗುಂಪೊಂದು ಸಜ್ಜಾದ ಮೇಲೆ ಕುಳಿತಿದ್ದರು. ಆಗ ಹಠಾತ್ತಾಗಿ ಸಜ್ಜಾ ಕುಸಿದು ಅನೇಕರು ಅದರ ಅಡಿ ಸಿಲುಕಿದರು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಭರತ್‍ಪುರ್ ಗ್ರಾಮಾಂತರ) ಧರ್ಮೇಂದ್ರ ಸಿಂಗ್ ಹೇಳಿದ್ದಾರೆ.

ಗಾಯಾಳುಗಳನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟು ಹೊತ್ತಿಗಾಗಲೇ ಕೆಲವರು ಮೃತಪಟ್ಟಿದ್ದರು, ಇನ್ನು ಕೆಲವು ಮಂದಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.15 ಮಂದಿ ಗಾಯಾಳುಗಳಲ್ಲಿ 8 ಜನರು ಜೈಪುರದ ಎಸ್‍ಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin