-ಓರ್ವ ಗೃಹಿಣಿಯು ಒಬ್ಬ ಕುಶಲ ಕಾರ್ಮಿಕನಿಗೆ ಸಮ : ದೆಹಲಿ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

House-Wife

ನವದೆಹಲಿ, ಏ.30-ಓರ್ವ ಗೃಹಿಣಿಯು ಒಬ್ಬ ಕುಶಲ ಕಾರ್ಮಿಕನಿಗೆ ಸಮನಾದ ಕಾರ್ಯಗಳನ್ನು ನಿರ್ವಹಿಸುತ್ತಾಳೆ ಎಂದು ದೆಹಲಿಯ ನ್ಯಾಯಾಲಯವೊಂದು ಹೇಳುವ ಮೂಲಕ ವನಿತೆಯರ ಮನೆಕೆಲಸದ ಪ್ರಾಮುಖ್ಯತೆಯನ್ನು ಗೌರವಿಸಿದೆ.   ಮೋಟಾರು ಅಪಘಾತ ಹಕ್ಕುಪ್ರತಿಪಾದನೆಗಳ ನ್ಯಾಯಮಂಡಳಿ (ಎಂಎಸಿಟಿ), ಗೃಹಿಣಿ ಕಾರ್ಯವು ಕುಶಲ ಕಾರ್ಮಿಕರ ಕೆಲಸಕ್ಕೆ ಸಮ ಎಂದು ತಿಳಿಸಿದೆ.   ನಾಲ್ಕು ವರ್ಷಗಳ ಹಿಂದೆ ರಸ್ತೆ ಅಪಘಾತವೊಂದರಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡ 32 ವರ್ಷದ ಗೃಹಿಣಿಗೆ 30.63 ಲಕ್ಷ ರೂ.ಗಳ ಪರಿಹಾರ ಘೋಷಣೆ ವೇಳೆ ನ್ಯಾಯಮಂಡಲಿ ಈ ಮಹತ್ವದ ಹೇಳಿಕೆಯನ್ನು ಪ್ರತಿಪಾದಿಸಿತು.2013ರಲ್ಲಿ ತನ್ನ ಆರು ತಿಂಗಳ ಶಿಶುವಿನೊಂದಿಗೆ ರಸ್ತೆ ದಾಟುತ್ತಿದ್ದ ಈ ಮಹಿಳೆಗೆ ಅತಿವೇಗದಿಂದ ಬಂದ ರಸ್ತೆ ಸಾರಿಗೆ ವಾಹನ (ಆರ್‍ಟಿವಿ) ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಮಹಿಳೆ ಶೇಕಡ 80ರಷ್ಟು ಅಂಗವಿಕಲತೆಗೆ ಒಳಗಾದರು ಮತ್ತು ಮಗುವಿನ ತಲೆಗೆ ಪೆಟ್ಟು ಬಿದ್ದಿತು.   ಓರ್ವ ಗೃಹಿಣಿ ಕೆಲಸವು ಒಬ್ಬ ಕುಶಲ ಅಥವಾ ನಿಪುಣನಂತೆ ಕಾರ್ಯನಿರ್ವಹಿಸುತ್ತಾಳೆ. ಮಹಿಳೆಯ ಬಲಗಾಲು ಶೇ.80ರಷ್ಟು ಊನವಾಗಿರುವುದರಿಂದ ಆಕೆಗೆ ಪರಿಹಾರ ನೀಡುವುದು ಸೂಕ್ತ ಎಂದು ಎಂಎಸಿಟಿ ಪೀಠಾಧಿಕಾರಿ ಅರುಣ್ ಭರದ್ವಾಜ್ ತೀರ್ಪು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin