ಗನ್ ಬಚ್ಚಿಡಲು ಯತ್ನಿಸುತ್ತಿದ್ದಾಗ ಮಿಸ್ ಫೈರಿಂಗ್ ಆಗಿ ಒಬ್ಬನ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Firing--01

ಶಿವಮೊಗ್ಗ,ಏ.30- ಮಿಸ್ ಫೈರಿಂಗ್‍ನಿಂದ ಹಾರಿದ ಗುಂಡು ತಲೆಗೆ ಹೊಕ್ಕು ಬೇಟೆಗೆ ತೆರಳಿದ್ದ ಒಬ್ಬಾತ ಸಾವನ್ನಪ್ಪಿರುವ ಘಟನೆ ಸಾಗರ ತಾಲ್ಲೂಕಿನಲ್ಲಿ ನಡೆದಿದೆ. ಕಾಡುಮನೆ ಸತೀಶ(35) ಮೃತಪಟ್ಟ ನತದೃಷ್ಟ.   ಸಾಗರ ತಾಲ್ಲೂಕು ಕಾಡುಮನೆ ಗ್ರಾಮ ಬಳಿಯ ಅರಣ್ಯಪ್ರದೇಶದಲ್ಲಿ ಪುನುಗು ಬೆಕ್ಕು ಬೇಟೆಯಾಡಲು ತಡರಾತ್ರಿ ಐವರು ತೆರಳಿದ್ದಾರೆ. ಈ ವೇಳೆ ಜೀಪೊಂದು ಬಂದಿದ್ದು , ಅರಣ್ಯ ಇಲಾಖೆ ಜೀಪ್ ಎಂದು ಭಾವಿಸಿದ ಬೇಟೆಗಾರರು ಲೋಡೆಡ್  ಗನ್ನನ್ನು ಬಚ್ಚಿಡಲು ಯತ್ನಿಸಿದ್ದಾರೆ. ಆಗ ಮಿಸ್ ಪೈರಿಂಗ್ ಆಗಿ ಹಾರಿದ ಗುಂಡು ಸತೀಶನ ತಲೆ ಹೊಕ್ಕಿದೆ. ಕೂಡಲೇ ಆತನನ್ನು ಸಾಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin