ದೇವರ ಹೆಸರಿನಲ್ಲಿ ಹಿಂಸಾಕೃತ್ಯ ಸಲ್ಲದು : ಪೋಪ್ ಫ್ರಾನ್ಸಿಸ್

ಈ ಸುದ್ದಿಯನ್ನು ಶೇರ್ ಮಾಡಿ

Pope-Fan

ಕೈರೋ, ಏ.30-ದೇವರ ಹೆಸರಿನಲ್ಲಿ ಯಾವುದೇ ಹಿಂಸಾಕೃತ್ಯ ನಡೆಸಲಾಗದು, ಏಕೆಂದರೆ ಹಿಂಸೆಯು ದೇವರ ಹೆಸರನ್ನು ಕೆಡಿಸುತ್ತದೆ ಎಂದು ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.  ಈಜಿಪ್ಟ್‍ನಲ್ಲಿ ಉಗ್ರರಿಂದ ಭೀಕರ ದಾಳಿಗೆ ಒಳಗಾದ ಎರಡು ಚರ್ಚ್‍ಗೆ ಭೇಟಿ ನೀಡಿದ ಅವರು, ಶಾಂತಿ ಸ್ಥಾಪನೆಗೆ ಕರೆ ನೀಡಿದರು. ಶಾಂತಿ ಮಾತ್ರ ಪವಿತ್ರವಾದುದು. ಇದಕ್ಕೆ ಧಕ್ಕೆ ತರುವ ಯತ್ನಗಳು ವಿಶ್ವದ ಯಾವುದೇ ಭಾಗದಲ್ಲೂ ನಡೆಯಬಾರದು ಎಂದು ಮನವಿ ಮಾಡಿದರು.



ಪೋಪ್ ಕೈರೋದಲ್ಲಿರುವ ಸೆಂಟ್ ಪೀಟರ್ಸ್ ಮತ್ತು ಸೆಂಟ್ ಪಾಲ್ ಚರ್ಚ್‍ಗಳಿಗೆ ಮೆರವಣಿಗೆಯಲ್ಲಿ ಬಂದು ಭೇಟಿ ನೀಡಿದರು. ಈ ಎರಡೂ ಚರ್ಚ್‍ಗಳ ಮೇಲೆ ಏ.9ರಂದು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 45 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin