ನಮಲ್ಲಿರುವುದು ಇಪಿಐ ಸಂಪ್ರದಾಯವಿಲ್ಲ ಇಪಿಐ ಸಂಸ್ಕೃತಿ : ಮೋದಿ ಮನ್ ಕಿ ಬಾತ್

ಈ ಸುದ್ದಿಯನ್ನು ಶೇರ್ ಮಾಡಿ

Man-Ki-Baat

ನವದೆಹಲಿ, ಏ.30-ಅಸಂಘಟಿತ ವಲಯದ ಕಾರ್ಮಿಕರ ನವಭಾರತದಲ್ಲಿ ವಿಐಪಿ (ಅತಿ ಗಣ್ಯ ವ್ಯಕ್ತಿಗಳು) ಸಂಪ್ರದಾಯವಿಲ್ಲ. ನಮಲ್ಲಿರುವುದು ಇಪಿಐ (ಎವ್ವೆರಿ ಪರ್ಸನ್ ಇಸ್ ಇಂಪಾರ್ಟೆಂಟ್). ಪ್ರತಿಯೊಬ್ಬ ಭಾರತೀಯನೂ ನಮಗೆ ಅತಿ ಗಣ್ಯ ವ್ಯಕ್ತಿಯೇ. ಇದನ್ನು ಎಲ್ಲರೂ ಮನಗಾಣಬೇಕಿದೆ ಎಂದು ಪ್ರಧಾನಿ ಬಣ್ಣಿಸಿದರು.  ಪ್ರತಿ ಮಾಸಾಂತ್ಯದ ಕೊನೆ ಭಾನುವಾರದಂದು ಎಂದಿನಂತೆ ದೇಶವಾಸಿಗಳನ್ನು ಉದ್ದೇಶಿಸಿ ಬಾನುಲಿಯಲ್ಲಿ ಮನ್ ಕಿ ಬಾತ್ (ಮನದ ಮಾತು) ಭಾಷಣ ಮಾಡಿದ ಅವರು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಮೂಲಮಂತ್ರ ಎಂದು ಪುನರುಚ್ಚರಿಸಿದರು.ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವ ಉದ್ದೇಶದಿಂದ ಗಣ್ಯಾತಿಗಣ್ಯರ ಕಾರುಗಳ ಮೇಲಿನ ಕೆಂಪುಗೂಟ (ರೇಡ್‍ಲೈಟ್) ನಿರ್ಬಂಧಿಸುವ ನಿರ್ಧಾರ ಕೈಗೊಂಡಿದ್ದಾಗಿ ತಮ್ಮ 31ನೇ ಮನ್ ಕಿ ಬಾತ್ ರೇಡಿಯೋ ಭಾಷಣದಲ್ಲಿ ಅವರು ಸಮರ್ಥಿಸಿಕೊಂಡರು.   ದೇಶದ ಬೆಳವಣಿಗೆಗೆ ಹವಾಮಾನ ವೈಪರೀತ್ಯ ದೊಡ್ಡ ಸವಾಲಾಗಿದೆ. ಪ್ರಕೃತಿ ಮತ್ತು ಋತುಮಾನದ ಬದಲಾವಣೆಯ ದುಷ್ಪರಿಣಾಮಗಳು ನಮ್ಮ ಮೇಲಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ನೀರು ಮತ್ತು ಗಾಳಿ ಮಾಲಿನ್ಯದಿಂದ ಸಮಸ್ಯೆ ಸೃಷ್ಟಿಯಾಗಿದೆ. ಮಾಲಿನ್ಯವನ್ನು ತಡೆಗಟ್ಟುವುದು ಅಗತ್ಯವಾಗಿದೆ. ಪರಿಸರವನ್ನು ರಕ್ಷಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಬೇಸಿಗೆ ಪ್ರಕೋಪವನ್ನು ಪ್ರಸ್ತಾಪಿಸಿ ಅವರು, ಬಿಸಿಲಿನ ಧಗೆಯಿಂದ ಪಶು-ಪಕ್ಷಿಗಳು ಬಸವಳಿದಿವೆ. ನೀರಿಗಾಗಿ ಪರಿತಪಿಸುತ್ತಿವೆ. ಮಕ್ಕಳು ಮತ್ತು ಯುವಕರು ಪ್ರಾಣಿ-ಪಕ್ಷಿಗಳಿಗೆ ನೀರು ಆಹಾರ ನೀಡಿ ಪೋಸಬೇಕೆಂದು ಪ್ರಧಾನಿ ಕಿವಿಮಾತು ಹೇಳಿದರು.   ಮಕ್ಕಳು ಬೇಸಿಗೆ ರಜೆಯನ್ನು ಸದುಪಯೋಗ ಮಾಡಿಕೊಳ್ಳಬೇಕು. ರಜೆಯಲ್ಲಿ ಹೊಸ ವಿಷಯಗಳನ್ನು ಕಲಿತುಕೊಳ್ಳಬೇಕು. ಇಂದಿನ ಯುವ ಜನಾಂಗ ಯಂತ್ರಮಾನವರಂತೆ ಆಗಬಾರದು. ಏಕತಾನತೆಯಿಂದ ಹೊರ ಬಂದು ದೇಶದ ವಿವಿಧ ಸಂಸ್ಕೃತಿ, ಆಚಾರ-ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕು ಅವರು ಸಲಹೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin