ಪಾಕ್ ತಾರೆಯ ಹಿಂದಿ ಮೀಡಿಯಂ ಒಲವು

ಈ ಸುದ್ದಿಯನ್ನು ಶೇರ್ ಮಾಡಿ

saba-qamar

ಸಬಾ ಖಾಮರ್-ಪಾಕಿಸ್ತಾನದ ಮೋಹಕ ತಾರೆ. ಇಫ್ರಾನ್ ಖಾನ್ ಅಭಿನಯದ ಹಿಂದಿ ಮೀಡಿಯಂ ಸಿನಿಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾಳೆ. ಈ ನಟಿಗೆ ಹಿಂದಿ ಮೀಡಿಯಂಗಾಗಿ ಭಾರತದಲ್ಲಿ ಪ್ರಚಾರ ಮಾಡುವ ಆಸೆಯಂತೆ. ಉರಿ ಸೇನಾ ನೆಲೆ ಮೇಲೆ ಉಗ್ರರ ದಾಳಿ ನಂತರ ಭಾರತ-ಪಾಕಿಸ್ತಾನ ಸಂಬಂಧ ಮತ್ತಷ್ಟು ಹಳಸಿರುವ ಸಂದರ್ಭದಲ್ಲೇ ಸಬಾ ಖಾಮರ್ ಹೇಳಿಕೆ ಉಭಯ ದೇಶಗಳ ನಡುವಣ ಉದ್ವಿಗ್ನತೆಯನ್ನು ಸ್ವಲ್ಪಮಟ್ಟಿಗೆ ಶಮನಗೊಳಿಸಬಹುದೇ ಎಂಬ ಪ್ರಶ್ನೆಯು ಉದ್ಭವಿಸಿದೆ. ಕಳೆದ ವರ್ಷ ಅಯಿ ದಿಲ್ ಹೈ ಮುಷ್ಕಿಲ್, ರಯೀಸ್ ಮತ್ತು ಡಿಯರ್ ಜಿಂದಗಿ-ಈ ಮೂರು ಸೂಪರ್‍ಹಿಟ್ ಸಿನಿಮಾಗಳು ವಿವಾದಕ್ಕೆ ಗುರಿಯಾಗಿದ್ದವು.ಪಾಕಿಸ್ತಾನಿ ತಾರೆಯರು ಈ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂಬುದು ಇದಕ್ಕೆ ಕಾರಣವಾಗಿತ್ತು. ಈ ಮೂರು ಸಿನಿಮಾಗಳಲ್ಲಿ ಕ್ರಮವಾಗಿ ಫವದ್ ಖಾನ್, ಮಹೀರಾ ಖಾನ್ ಮತ್ತು ಅಲಿ ಝಫರ್ ಅಭಿನಯಿಸಿದ್ದರು. ಉರಿ ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್‍ನಿಂದ ಇಂಡೋ-ಪಾಕ್ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ಉಲ್ಬಣಗೊಂಡ ಸಂದರ್ಭವದು. ಪಾಕ್ ತಾರೆಯರು ನಟಿಸಿರುವ ಈ ಚಿತ್ರಗಳನ್ನು ಪ್ರದರ್ಶಿಸಿದರೆ ಚಿತ್ರಮಂದಿರಗಳ ಮೇಲೆ ದಾಳಿ ನಡೆಸುವುದಾಗಿ ಅನೇಕ ಸಂಘಟನೆಗಳು ಬೆದರಿಕೆ ಹಾಕಿದ್ದವು. ಇದೇ ವಿಷಯದಲ್ಲಿ ಬಾಲಿವುಡ್ ರಣರಂಗ ವಾಗಿತ್ತು. ಪರ-ವಿರೋಧಿ ಅಭಿ ಪ್ರಾಯ ವ್ಯಕ್ತವಾಗಿ ಗೊಂದಲ-ವಿವಾದಗಳು ಭುಗಿಲೆದ್ದಿತ್ತು. ಈಗ ಪರಿಸ್ಥಿತಿ ಕೊಂಚ ಮಟ್ಟಿಗೆ ತಿಳಿಗೊಂಡಿದ್ದು, ಸಬಾ ಖಾಮರ್ ಹಿಂದಿ ಮೀಡಿಯಂ ಪ್ರಚಾರಕ್ಕಾಗಿ ಗಡಿ ದಾಟಿ ಬಂದರೆ ಉದ್ವಿಗ್ನತೆ ಮತ್ತಷ್ಟು ಉಪಶಮನ ವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin