ಯಶಸ್ವಿಯಾಗಿ ನಡೆದ 2ನೇ ಸುತ್ತಿನ ಪೋಲಿಯೋ ಲಸಿಕಾ ಆಂದೋಲನ

ಈ ಸುದ್ದಿಯನ್ನು ಶೇರ್ ಮಾಡಿ

Polio

ಬೆಂಗಳೂರು, ಏ.30-ರಾಜ್ಯದಲ್ಲಿ 74ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಎರಡನೆ ಸುತ್ತಿನ ಪಲ್ಸ್ ಪೋಲಿಯೋ ಆಂದೋಲನ ಯಶಸ್ವಿಯಾಗಿ ನಡೆಯಿತು.  ಭಾರತವನ್ನುಪೋಲಿಯೋ ಮುಕ್ತ ಮಾಡಲು ಪ್ರತಿ ವರ್ಷ ಸಮರೋಪಾದಿಯಲ್ಲಿ ಲಸಿಕಾ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಏ.2 ರಂದು ಮೊದಲ ಸುತ್ತಿನ ಲಸಿಕಾ ಆಂದೋಲನ ನಡೆದಿತ್ತು. ಇಂದು ಎರಡನೆ ಹಂತದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಯಾವ ಮಗುವೂ ಲಸಿಕೆಯಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಮಾರು 32,617 ಬೂತ್‍ಗಳನ್ನು ರಾಜ್ಯಾದ್ಯಂತ ಸ್ಥಾಪಿಸಿತ್ತು.51,732 ತಂಡಗಳಲ್ಲಿ 1,03,464 ಕಾರ್ಯಕರ್ತರು, 6,522 ಮೇಲ್ವಿಚಾರಕರು ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಲಸಿಕಾ ಆಂದೋಲನದಲ್ಲಿ ಭಾಗವಹಿಸಿದ್ದರು. 1020 ಸಂಚಾರಿ  ತಂಡಗಳು ಕೂಡ ಕೆಲಸ ಮಾಡಿವೆ. ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಮೊದಲ ಹಂತದಲ್ಲಿ ಲಸಿಕೆ ಹಾಕಿಸಿದ್ದರೂ ಎರಡನೇ ಹಂತದಲ್ಲೂ ಲಸಿಕೆ ಹಾಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿತ್ತು.  ದೇಶದಲ್ಲಿ ಪಿ-2 ಮಾದರಿಯ ಪೋಲಿಯೋ ಸೋಂಕು ಸಂಪೂರ್ಣ ನಿವಾರಣೆಯಾಗಿದ್ದು, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣಪತ್ರವನ್ನೂ ಪಡೆದಿದೆ. ಪಿ-3 ಮಾದರಿಯ ಸೋಂಕಿನ ಪ್ರಕರಣಗಳು ಈವರೆಗೂ ವರದಿಯಾಗಿಲ್ಲ. ಆದರೆ ಪಿ-1 ಮಾದರಿಯ ಪ್ರಕರಣಗಳು ಅಲ್ಲಲ್ಲಿ ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಮಗುವಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿತ್ತು. ಜನರು ಕೂಡ ಅತ್ಯುತ್ಸಾಹದಿಂದ ಕೇಂದ್ರಗಳಿಗೆ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin