ಲಕ್ಷ್ಮಣರೇಖೆ ದಾಟದಂತೆ ಬಿಜೆಪಿ ರಾಜ್ಯ ನಾಯಕರಿಗೆ ರಾಷ್ಟ್ರೀಯ ನಾಯಕರ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Amith-Shah

ಬೆಂಗಳೂರು, ಏ.30-ರಾಜ್ಯ ಬಿಜೆಪಿಯೊಳಗೆ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಮೂರು ಅಂಶಗಳ ಸೂತ್ರವನ್ನು ಸಿದ್ಧಪಡಿಸಿರುವ ರಾಷ್ಟ್ರೀಯ ನಾಯಕರು ಪಕ್ಷದಲ್ಲಿ ಇನ್ನು ಮುಂದೆ ಯಾರೊಬ್ಬರೂ ಲಕ್ಷ್ಮಣರೇಖೆ ದಾಟದಂತೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್ ಮೂಲಕ ಸಂದೇಶವನ್ನು ರವಾನಿಸಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ಗೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಬ್ರಿಗೇಡ್ ಚಟುವಟಿಕೆಯಲ್ಲಿ ಪಕ್ಷದ ಯಾರೊಬ್ಬ ಕಾರ್ಯಕರ್ತರು ಭಾಗವಹಿಸಬಾರದು. ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಬಾರದು ಹಾಗೂ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆಗಳನ್ನು ಯಾರೊಬ್ಬರೂ ನೀಡಬಾರದು ಎಂದು ಅಮಿತ್‍ಷಾ ರಾಜ್ಯನಾಯಕರಿಗೆ ಸೂಚಿಸಿದ್ದಾರೆ. [ಇದನ್ನೂ ಓದಿ :  [ ಇದನ್ನೂ ಓದಿ : ಬಿಜೆಪಿ ಅನಗತ್ಯ ಗೊಂದಲದ ಬಗ್ಗೆ ಜನರಲ್ಲಿ ಕ್ಷಮೆಯಾಚಿಸಿದ ಲಿಂಬಾವಳಿ ]ಕರ್ನಾಟಕದಲ್ಲಿ ನಡೆಯುತ್ತಿರುವ ಪಕ್ಷದ ಬೆಳವಣಿಗೆಗಳನ್ನು ಸೂಕ್ಷಮವಾಗಿ ಗಮನಿಸುತ್ತಿದ್ದೇವೆ. ಆಂತರಿಕ ಸಮಸ್ಯೆಯನ್ನು ಬಗೆಹರಿಸಲಾರದಷ್ಟು ನಾವು ಅಸಹಾಯಕರಲ್ಲ. ಸೂಕ್ತ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರು ಮಧ್ಯಪ್ರವೇಶ ಮಾಡುತ್ತೇವೆ. ಯಾರೊಬ್ಬರೂ ಲಕ್ಷ್ಮಣರೇಖೆ ದಾಟಬಾರದು, ದಾಟಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಅಮಿತ್ ಷಾ ಮುರಳೀಧರ್ ರಾವ್ ಮೂಲಕ ಕಠಿಣ ಎಚ್ಚರಿಕೆ ನೀಡಿದ್ದಾರೆ.  ಕರ್ನಾಟಕದಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಸೃಷ್ಟಿಸಿ ಪಕ್ಷದಲ್ಲಿ ಬಿಕ್ಕಟ್ಟು ಸೃಷ್ಟಿಸಿದರೆ ಯಾರೇ ಆಗಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆನ್ನಲ್ಲಾಗಿದೆ. [ ಇದನ್ನೂ ಓದಿ : ನಮ್ಮ ಒಳಜಗಳದಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಲ್ಲ : ಯಡಿಯೂರಪ್ಪ  ]

ಬ್ರಿಗೇಡ್ ಚಟುವಟಿಕೆ ನಿಲ್ಲಿಸಿ:

ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಇನ್ನು ಮುಂದೆ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಚಟುವಟಿಕೆ ನಡೆಸಬಾರದು. ಪಕ್ಷದ ಕಾರ್ಯಕರ್ತರು ಇದರ ಚಟುವಟಿಕೆಯಲ್ಲಿ ಭಾಗವಹಿಸದಂತೆ ತಡೆಹಾಕಬೇಕೆಂದೂ ಹೈಕಮಾಂಡ್ ಸೂಚಿಸಿದೆ.  ಹಿಂದುಳಿದ ವರ್ಗವನ್ನು ಸಂಘಟಿಸುವುದಾದರೆ ಪಕ್ಷದ ವತಿಯಿಂದಲೇ ಸಂಘಟಿಸಿ ಪಕ್ಷದ ಬ್ಯಾನರ್ ಅಡಿಯೇ ಎಲ್ಲಾ ನಡೆಯಬೇಕು. ಪ್ರತ್ಯೇಕ ಸಭೆ-ಸಮಾರಂಭಗಳನ್ನು ನಡೆಸುವುದು ಯಾರಿಗೂ ಶೋಭೆ ತರುವುದಿಲ್ಲ. ಈ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಕಿವಿಮಾತು ಹೇಳಿದ್ದಾರೆ.  ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಕಾರ್ಯವೈಖರಿಗೂ ಅಮಿತ್ ಷಾ ಅಸಮಾಧಾನ ಹೊರಹಾಕಿದ್ದಾರೆಂದು ತಿಳಿದುಬಂದಿದೆ.  ರಾಜ್ಯಾಧ್ಯಕ್ಷರಾಗಿ ನೀವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವಲ್ಲಿ ಎಡವಿದ್ದೀರೆಂದು ಹೇಳಿದ್ದಾರೆ. [ ಇದನ್ನೂ ಓದಿ :  ಬೆಂಬಲಿಗರಿಗೆ ಕೊಕ್ ನೀಡಿ ಯಡಿಯೂರಪ್ಪ-ಈಶ್ವರಪ್ಪ ಬಣಕ್ಕೆ ಬಿಸಿ ಮುಟ್ಟಿಸಿದ ಹೈಕಮಾಂಡ್ ]

ಕೋರ್ ಕಮಿಟಿಯಲ್ಲಿ ಚರ್ಚೆಯಾಗಲಿ:

ಇನ್ನು ಮುಂದೆ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವ ಮುನ್ನ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆಯಾಗಬೇಕು.ಪದಾಧಿಕಾರಿಗಳ ನೇಮಕಾತಿ, ಮೋರ್ಚಾಗಳಿಗೆ ನೇಮಕ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ಕೋರ್‍ಕಮಿಟಿಯಲ್ಲಿ ಚರ್ಚಿಸಲೇಬೇಕು, ಪ್ರತಿ ತಿಂಗಳು ಪ್ರಮುಖರ ಸಭೆ, ಕಾರ್ಯಕಾರಿಣಿ ಸಭೆ, ಪದಾಧಿಕಾರಿಗಳ ಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳು ಪಕ್ಷದ ಕಚೇರಿಯಲ್ಲೇ ನಡೆಯಲಿ ಎಂದು ಅಮಿತ್ ಷಾ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin