ಸರ್ಕಾರಿ ಸೇವೆಗಳನ್ನು ಹೊರಗುತ್ತಿಗೆ ನೀಡುವಂತೆ ನೀತಿ ಆಯೋಗ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Neeti-Ayog

ನವದೆಹಲಿ, ಏ.30-ಸರ್ಕಾರಿ ಆಡಳಿತ ಯಂತ್ರದ ಮೇಲೆ ಅವಲಂಬನೆ ಕಡಿಮೆ ಮಾಡಲು ಸಾರ್ವಜನಿಕ ವಲಯದ (ಸರ್ಕಾರಿ) ಸೇವೆಗಳನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡಬೇಕೆಂದು ಚಿಂತಕರ ಚಾವಡಿ (ಥಿಂಕ್ ಟ್ಯಾಂಕ್) ಎಂದೇ ಪರಿಗಣಿಸಲ್ಪಟ್ಟಿರುವ ನೀತಿ ಆಯೋಗ ಕೇಂದ್ರ ಸರ್ಕಾರಕ್ಕೆ ಸಲಹೆ ಮಾಡಿದೆ. ಅಲ್ಲದೇ ಖಾಸಗಿ ಕ್ಷೇತ್ರದ ಪ್ರತಿಭಾವಂತರನ್ನೂ ಇದಕ್ಕಾಗಿ ನಿಯೋಜಿಸುವಂತೆಯೂ ತಿಳಿಸಿದೆ.  ಸರ್ಕಾರದ ಆಡಳಿತ ವ್ಯವಸ್ಥೆಯ ಚುರುಕುತನ ಮತ್ತು ಸ್ಪರ್ಧಾತ್ಮಕತೆ ದೃಷ್ಟಿಯಿಂದ ಸಂಬಂಧಪಟ್ಟ ಕ್ಷೇತ್ರಗಳ ಪರಿಣಿತರನ್ನೂ ಸೇರ್ಪಡೆ ಮಾಡಿಕೊಳ್ಳುವಂತೆ ನೀತಿ ಆಯೋಗ ಶಿಫಾರಸು ಮಾಡಿದೆ.

ಮೂರು ವರ್ಷಗಳ ಕ್ರಿಯಾ ಕಾರ್ಯಸೂಚಿ ಕುರಿತ ತನ್ನ ಕರಡು ವರದಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದ್ದು, 2018-19ರ ವರ್ಷಾಂತ್ಯದ ವೇಳೆಗೆ ಆಡಳಿತಕ್ಕೆ ಸಂಬಂಧಿಸಿದ ಕಾರ್ಯಗಳ ಸಂಪೂರ್ಣ ಡಿಜಿಟಲೀಕರಣಕ್ಕೆ ಕಾಲಮಿತಿಯನ್ನು ನಿಗದಿಗೊಳಿಸಿದೆ.  ನಾಗರಿಕ ಸೇವೆಗಳು ಸರ್ಕಾರದ ಬೆನ್ನೆಲುಬು. ಹೀಗಾಗಿ ತ್ವರಿತ ನಿರ್ಧಾರಗಳನ್ನು ಕೈಗೊಳ್ಳಲು ಮತ್ತು ಅವುಗಳನ್ನು ಅನುಷ್ಠಾನಗೊಳಿಸಲು ಅದನ್ನು ಸಬಲೀಕರಣಗೊಳಿಸುವ ಅಗತ್ಯವಿದೆ. ಉತ್ತಮ ಸಾಧನೆ ತೋರುವವರನ್ನು ಪುರಸ್ಕರಿಸುವ ಮತ್ತು ಕಳಪೆ ಸಾಧನೆಯವರಿಗೆ ವಾಗ್ದಾಂಡನೆ ವಿಧಿಸುವ ಉದ್ದೇಶಿತ ಕ್ರಮಗಳಿಂದ ಮಾತ್ರ ಉನ್ನತಮಟ್ಟದ ಸುಸ್ಥಿರತೆಯನ್ನು ಸಾಧಿಸಲು ಸಾಧ್ಯ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ನೀತಿ ರೂಪಿಸುವುದು ಒಂದು ಪರಿಣಾಮಕಾರಿ ಚಟುವಟಿಕೆ. ಆದಕಾರಣ, ಖಾಸಗಿ ಕ್ಷೇತ್ರದ ಪ್ರತಿಬಾವಂತರು ಮತ್ತು ವಿಷಯ ಪರಿಣಿತರನ್ನು ಕರೆತರುವುದು ಅಗತ್ಯ ಎಂದು ಸಹ ಒತ್ತಾಯಿಸಲಾಗಿದೆ.

ನ್ಯಾಯಾಂಗ ಸಾಧನೆ ಸೂಚ್ಯಂಕ :

ಬಾಕಿ ಇರುವ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಲು ಮತ್ತು ವಿಳಂಬ ತಪ್ಪಿಸಲು ನ್ಯಾಯಾಂಗ ಸಾಧನೆ ಸೂಚ್ಯಂಕ ವ್ಯವಸ್ಥೆಯನ್ನೂ ಜಾರಿಗೊಳಿಸಬೇಕೆಂದೂ ಆಯೋಗವು ಸಲಹೆ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin