ಹೊಸ ನೋಟಿನಲ್ಲಿ ಗಾಂಧೀಜಿ ಭಾವಚಿತ್ರವೇ ನಾಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

New-Notes

ಮೊರೈನಾ(ಮ.ಪ್ರ), ಏ.30-ನೋಟು ಅಮಾನೀಕರಣದ ನಂತರ ನಡೆಯುತ್ತಿರುವ ಅವಾಂತರಗಳು ಇನ್ನೂ ನಿಂತಿಲ್ಲ. ಮಧ್ಯಪ್ರದೇಶದ ಎಟಿಎಂವೊಂದರಿಂದ ಡ್ರಾ ಮಾಡಲಾದ 500 ಮುಖಬೆಲೆಯ ನೋಟಿನಲ್ಲಿ ಮಹಾತ್ಮಗಾಂಧೀಜಿಯವರ ಭಾವಚಿತ್ರವೇ ನಾಪತ್ತೆಯಾಗಿದೆ. ಮಹಾರಾಷ್ಟ್ರದ ಮೊರೈನಾ ಜಿಲ್ಲೆಯ ಶೋಯೇಪುರ್ ಗ್ರಾಮದ ಗೋವರ್ಧನ್ ಶರ್ಮಾ ಅವರು ಎಸ್‍ಬಿಐ ಎಟಿಎಂನಿಂದ ಏ.25ರಂದು ಸುಮಾರು 2 ಸಾವಿರ ರೂ. ಡ್ರಾ ಮಾಡಿದ್ದಾರೆ. 500 ರೂ. ಮುಖಬೆಲೆಯ ನೋಟುಗಳು ಎಟಿಎಂನಿಂದ ಹೊರಬಂದಿದ್ದು, ಈ ಎಲ್ಲಾ ನೋಟುಗಳಲ್ಲಿ ಮಹಾತ್ಮಗಾಂಧಿ ಭಾವಚಿತ್ರ ನಾಪತ್ತೆಯಾಗಿದೆ.



ಈ ಗಾಂಧೀಜಿ ಭಾವಚಿತ್ರವಿಲ್ಲದ ನೋಟುಗಳನ್ನು ಅನಧಿಕೃತ ಎಂದು ಪರಿಗಣಿಸುವುದರಿಂದ ಗೋವರ್ಧನ್ ಶರ್ಮಾ ಕಂಗಾಲಾಗಿದ್ದಾರೆ. ತಕ್ಷಣವೇ ಎಟಿಎಂ ರಸೀದಿಯಲ್ಲಿದ್ದ ನಂಬರ್‍ಗೆ ಕರೆ ಮಾಡಿ ಬ್ಯಾಂಕ್‍ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ನೋಟುಗಳು ಅಸಲಿಯಾಗಿದ್ದು, ಮುದ್ರಣ ದೋಷದಿಂದ ಗಾಂಧೀಜಿ ಚಿತ್ರ ಕಾಣೆಯಾಗಿದೆ. ಗ್ರಾಹಕರಿಗೆ ತೊಂದರೆಯಾಗದಂತೆ ಈ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin