ಅಪಘಾತದಲ್ಲಿ ಮೃತಪಟ್ಟ ಮಗುವಿನ ಶವವನ್ನು ಬೈಕ್‍ನಲ್ಲಿ ಮನೆಗೆ ಕೊಂಡೊಯ್ದ ತಂದೆ

ಈ ಸುದ್ದಿಯನ್ನು ಶೇರ್ ಮಾಡಿ

Boy-Dead--01

ಬೆಂಗಳೂರು, ಮೇ 1– ಅಪಘಾತದಲ್ಲಿ ಮೃತಪಟ್ಟ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೂ ಮುನ್ನವೇ ತಂದೆ ಬೈಕ್‍ನಲ್ಲಿ ಹೊತ್ತೊಯ್ದ ಪ್ರಸಂಗ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.  ನಿನ್ನೆ ರಾತ್ರಿ ಕರ್ಪೂರುಗೇಟ್ ಬಳಿ ಬೈಕ್ ಅಪಘಾತ ಸಂಭವಿಸಿದ್ದು, ಅದರಲ್ಲಿ ಗಾಯಗೊಂಡ ಮಗುವನ್ನು ತಂದೆ ತನ್ನ ಸ್ನೇಹಿತನ ಬೈಕ್‍ನಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿ ಬೇರೆ ರೋಗಿಗಳ ತಪಾಸಣೆಗೆ ತೆರಳಿದ್ದಾರೆ. ಏನು ಮಾಡಲು ತೋಚದ ಮಗುವಿನ ತಂದೆ ಮೃತ ದೇಹವನ್ನು ಸ್ನೇಹಿತನ ಬೈಕ್‍ನಲ್ಲಿ ಹೊತ್ತು ಮನೆಗೆ ಬಂದಿದ್ದಾರೆ.ಘಟನೆ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮೃತಪಟ್ಟ ಮಗು ಹಾಗೂ ಪೋಷಕರನ್ನು ಪತ್ತೆ ಮಾಡಿದ್ದಾರೆ.  ಇಂದು ಬೆಳಗ್ಗೆ ಮಗುವಿನ ಶವವನನ್ನು ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಮಗುವಿನ ತಂದೆ ಸ್ನೇಹಿತ ಲಿಟನ್‍ಖಾನ್ ಅವರು, ಆಸ್ಪತ್ರೆಗೆ ಹೋದಾಗ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಹೇಳಿದರು. ಆ ನಂತರ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಹಾಗಾಗಿ ಶವವನ್ನು ಬೈಕ್‍ನಲ್ಲಿ ಹೊತ್ತು ಮನೆಗೆ ತಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.  ಮಗುವಿನ ತಂದೆ ಚಿಂದಿ ಆಯುವ ಕೆಲಸ ಮಾಡುತ್ತಾರೆ. ಆ್ಯಂಬುಲೆನ್ಸ್‍ಗೆ ವಿಚಾರಿಸಲೂ ಇಲ್ಲ ನಮಗೂ ಮಾಹಿತಿ ಇರಲಿಲ್ಲ ಎಂದು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin