ಗೂಡ್ಸ್ ರೈಲು ಅಪ್ಪಳಿಸಿ 8 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Goods-Train

ಪಾಟ್ನಾ, ಮೇ 1-ಗೂಡ್ಸ್ ರೈಲು ಅಪ್ಪಳಿಸಿ ಎಂಟು ಮಂದಿ ಮೃತಪಟ್ಟ ದಾರುಣ ಘಟನೆ ಬಿಹಾರದ ಶೇಖ್‍ಪುರ ಜಿಲ್ಲೆಯ ಸಿರಾರಿ ರೈಲು ನಿಲ್ದಾಣದ ಬಳಿ ನಿನ್ನೆ ರಾತ್ರಿ ಸಂಭವಿಸಿದೆ. ಈ ದುರಂತದಲ್ಲಿ ಇನ್ನಿಬ್ಬರು ತೀವ್ರ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.   ಸಿರಾಸಿ ರೈಲು ನಿಲ್ದಾಣದ ಅಂಡರ್‍ಪಾಸ್ ಬಳಿ ನಿನ್ನೆ ರಾತ್ರಿ 7 ಗಂಟೆಯಲ್ಲಿ 10 ಮಂದಿ ಹಳಿ ದಾಟುತ್ತಿದ್ದಾಗ ಗೂಡ್ಸ್ ರೈಲು ಅವರ ಮೇಲೆ ಹರಿಯಿತು. ಪ್ರತಿಕೂಲ ಹವಾಮಾನದಿಂದಾಗಿ ರೈಲು ಬರುತ್ತಿರುವುದನ್ನು ಗುರುತಿಸುವಲ್ಲಿ ಗ್ರಾಮಸ್ಥರು ವಿಫಲರಾದರು. ಈ ದುರ್ಘಟನೆಯಲ್ಲಿ ಇಬ್ಬರು ಮಹಿಳೆಯರೂ ಸೇರಿದಂತೆ ಎಂಟು ಮಂದಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.

ರೈಲು ಅಪ್ಪಳಿಸಿದ ಕಾರಣ ಛಿದ್ರಗೊಂಡ ಎರಡು ಮೃತದೇಹಗಳನ್ನು ಗ್ರಾಮಸೃರು ಕೊಂಡೊಯ್ಡಿದ್ದಾರೆ. ಆರು ಶವಗಳನ್ನು ಅಪಘಾತ ಸ್ಥಳದಿಂದ ಪೆÇಲೀಸರು ವಶಪಡಿಸಿಕೊಂಡಿದ್ಧಾರೆ.
ತೀವ್ರ ಗಾಯಗೊಂಡ ಇಬ್ಬರನ್ನು ಗ್ರಾಮಸ್ಥರು ಆಸ್ಪತ್ರೆಗೆ ಸೇರಿಸಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ರೈಲ್ವೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin