ನುಗ್ಗೆಕಾಯಿ

ಈ ಸುದ್ದಿಯನ್ನು ಶೇರ್ ಮಾಡಿ
ನುಗ್ಗೆಕಾಯಿ ನುಗ್ಗೆ ಕಾಯಿ ಉದರ ದೋಷಗಳು, ಅಲರ್ಜಿ ನಿವಾರಿಸುತ್ತದೆ. ಲಿವರ್ ರಕ್ಷಣೆ, ಡಯಾಬಿಟಿಸ್ ನಿಯಂತ್ರಣ, ನೇತ್ರ ರಕ್ಷಣೆ, ಹೃದಯ ಆರೋಗ್ಯ ಆರೈಕೆ,  ಗಾಯ ಗುಣಕಾರಿ, ಆರೋಗ್ಯಕರ ಕೂದಲು ಮತ್ತು ಚರ್ಮ ರಕ್ಷಣೆಯಲ್ಲಿ ಇವು ನುಗ್ಗೆ ಪ್ರಮುಖ ಪಾತ್ರ ವಹಿಸುತ್ತದೆ. ಮೂತ್ರಪಿಂಡ, ಮೂತ್ರಕೋಶ ಮತ್ತು ಮೂತ್ರಚೀಲಗಳಲ್ಲಿ ಕಲ್ಲುಗಳನ್ನು ನಿವಾರಿಸಲು ನುಗ್ಗೆ ಸಹಕಾರಿ. ಎಳೆ ನುಗ್ಗೆಕಾಯಿಗಳನ್ನು ತುಂಡು ತುಂಡು ಮಾಡಿ ತೊಗರಿ ಬೇಳೆಯೊಂದಿಗೆ ಬೇಯಿಸಿ ರುಚಿಕರವಾದ ಹುಳಿ ಅಥವಾ ಸಾರು ತಯಾರಿಸಬಹುದು. ನಿಂಬೆಕಾಯಿ ಉಪ್ಪಿನಕಾಯಿಗೆ ನುಗ್ಗೆಕಾಯಿ ತುಂಡು ಮಾಡಿ ಸೇರಿಸಬಹುದು. ಪಕ್ವವಾದ ನಂತರ ಈ ನುಗ್ಗೆಕಾಯಿ ತಿನ್ನಲು ರುಚಿ. ನುಗ್ಗೆಕಾಯಿಯನ್ನು ಯಾವ ರೀತಿಯಲ್ಲಿ ಸೇವಿಸಿದರೂ ಸರಿಯೇ ಅದು ದೇಹಾರೋಗ್ಯವನ್ನು ಉತ್ತಮಪಡಿಸುತ್ತದೆ. ಎರಡು ಬಟ್ಟಲು ಕುದಿಯುವ ನೀರಿಗೆ ಒಂದು ಹಿಡಿ ನುಗ್ಗೆಸೊಪ್ಪು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಐದು ನಿಮಿಷ ಬೇಯಿಸಿ, ಬಳಿಕ ಆ ಪಾತ್ರೆಯನ್ನು ತಣ್ಣೀರಿನಲ್ಲಿಟ್ಟು, ಸೊಪ್ಪಿನ ರಸವನ್ನು ತಂಪು ಮಾಡಿ, ಬಸಿಯಬೇಕು. ಆ ರಸಕ್ಕೆ ಸ್ವಲ್ಪ ಅಡಿಗೆ ಉಪ್ಪು, ಕಾಳು ಮೆಣಸಿನ ಪುಡಿ ಮತ್ತು ನಿಂಬೆ ರಸ ಸೇರಿಸಬೇಕು. ಹೀಗೆ ತಯಾರಿಸಿದ ಒಂದು ಬಟ್ಟಲು ರಸ ಪ್ರತಿದಿನ ಬೆಳಿಗ್ಗೆ ಸೇವಿಸುತ್ತಿದ್ದರೆ  ಸಂಭೋಗ ಸಾಮಥ್ರ್ಯದ ಅಭಾವ, ನರ ದೌರ್ಬಲ್ಯ, ಉಬ್ಬಸ, ನೆಗಡಿ, ಪುಪ್ಪುಸ ನಳಿಕಾದಾಹ, ಕ್ಷಯ, ಅಪೌಷ್ಟಿಕತೆ, ಅರಕ್ತತೆ ಇತ್ಯಾದಿ ವ್ಯಾಧಿಗಳಲ್ಲಿ ಗಮನಾರ್ಹ ಪರಿಹಾರ ಲಭಿಸುತ್ತದೆ. ಸೊಪ್ಪು ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ರಕ್ತಶುದ್ದಿಯಾಗಿ, ಆರೋಗ್ಯ ವೃದ್ದಿಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ. ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗೆ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ. ಈ ಸಾರನ್ನು ಅಬಾಲವೃದ್ದಿಯಾದಿಯಾಗಿ ಬಳಸಬಹುದು.ಒಂದೇ ಪಾಶ್ರ್ವದಲ್ಲಿ ತಲೆ ನೋಯುತ್ತಿದ್ದರೆ, ನಾಲ್ಕೈದು ತೊಟ್ಟು ನುಗ್ಗೆ ಸೊಪ್ಪಿನ ರಸವನ್ನು ಎಡ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಬಲ ಕಿವಿಗೂ, ಬಲ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಎಡಕಿವಿಗೂ ಬಿಡುವುದರಿಂದ ಗುಣಮುಖ ಕಂಡುಬರುತ್ತದೆ. ಈ ಕ್ರಮವನ್ನು ದಿನಕ್ಕೆ ಒಂದಾವರ್ತಿಯಂತೆ ಮೂರು ದಿನಗಳವರೆಗೆ ಮಾಡುವುದು ಅಗತ್ಯ.

ನುಗ್ಗೆ ಕಾಯಿ ಉದರ ದೋಷಗಳು, ಅಲರ್ಜಿ ನಿವಾರಿಸುತ್ತದೆ. ಲಿವರ್ ರಕ್ಷಣೆ, ಡಯಾಬಿಟಿಸ್ ನಿಯಂತ್ರಣ, ನೇತ್ರ ರಕ್ಷಣೆ, ಹೃದಯ ಆರೋಗ್ಯ ಆರೈಕೆ, ಗಾಯ ಗುಣಕಾರಿ, ಆರೋಗ್ಯಕರ ಕೂದಲು ಮತ್ತು ಚರ್ಮ ರಕ್ಷಣೆಯಲ್ಲಿ ಇವು ನುಗ್ಗೆ ಪ್ರಮುಖ ಪಾತ್ರ ವಹಿಸುತ್ತದೆ. ಮೂತ್ರಪಿಂಡ, ಮೂತ್ರಕೋಶ ಮತ್ತು ಮೂತ್ರಚೀಲಗಳಲ್ಲಿ ಕಲ್ಲುಗಳನ್ನು ನಿವಾರಿಸಲು ನುಗ್ಗೆ ಸಹಕಾರಿ. ಎಳೆ ನುಗ್ಗೆಕಾಯಿಗಳನ್ನು ತುಂಡು ತುಂಡು ಮಾಡಿ ತೊಗರಿ ಬೇಳೆಯೊಂದಿಗೆ ಬೇಯಿಸಿ ರುಚಿಕರವಾದ ಹುಳಿ ಅಥವಾ ಸಾರು ತಯಾರಿಸಬಹುದು. ನಿಂಬೆಕಾಯಿ ಉಪ್ಪಿನಕಾಯಿಗೆ ನುಗ್ಗೆಕಾಯಿ ತುಂಡು ಮಾಡಿ ಸೇರಿಸಬಹುದು. ಪಕ್ವವಾದ ನಂತರ ಈ ನುಗ್ಗೆಕಾಯಿ ತಿನ್ನಲು ರುಚಿ. ನುಗ್ಗೆಕಾಯಿಯನ್ನು ಯಾವ ರೀತಿಯಲ್ಲಿ ಸೇವಿಸಿದರೂ ಸರಿಯೇ ಅದು ದೇಹಾರೋಗ್ಯವನ್ನು ಉತ್ತಮಪಡಿಸುತ್ತದೆ.ಎರಡು ಬಟ್ಟಲು ಕುದಿಯುವ ನೀರಿಗೆ ಒಂದು ಹಿಡಿ ನುಗ್ಗೆಸೊಪ್ಪು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಐದು ನಿಮಿಷ ಬೇಯಿಸಿ, ಬಳಿಕ ಆ ಪಾತ್ರೆಯನ್ನು ತಣ್ಣೀರಿನಲ್ಲಿಟ್ಟು, ಸೊಪ್ಪಿನ ರಸವನ್ನು ತಂಪು ಮಾಡಿ, ಬಸಿಯಬೇಕು. ಆ ರಸಕ್ಕೆ ಸ್ವಲ್ಪ ಅಡಿಗೆ ಉಪ್ಪು, ಕಾಳು ಮೆಣಸಿನ ಪುಡಿ ಮತ್ತು ನಿಂಬೆ ರಸ ಸೇರಿಸಬೇಕು. ಹೀಗೆ ತಯಾರಿಸಿದ ಒಂದು ಬಟ್ಟಲು ರಸ ಪ್ರತಿದಿನ ಬೆಳಿಗ್ಗೆ ಸೇವಿಸುತ್ತಿದ್ದರೆ ಸಂಭೋಗ ಸಾಮಥ್ರ್ಯದ ಅಭಾವ, ನರ ದೌರ್ಬಲ್ಯ, ಉಬ್ಬಸ, ನೆಗಡಿ, ಪುಪ್ಪುಸ ನಳಿಕಾದಾಹ, ಕ್ಷಯ, ಅಪೌಷ್ಟಿಕತೆ, ಅರಕ್ತತೆ ಇತ್ಯಾದಿ ವ್ಯಾಧಿಗಳಲ್ಲಿ ಗಮನಾರ್ಹ ಪರಿಹಾರ ಲಭಿಸುತ್ತದೆ.ಸೊಪ್ಪು ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ರಕ್ತಶುದ್ದಿಯಾಗಿ, ಆರೋಗ್ಯ ವೃದ್ದಿಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ.ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗೆ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ. ಈ ಸಾರನ್ನು ಅಬಾಲವೃದ್ದಿಯಾದಿಯಾಗಿ ಬಳಸಬಹುದು.ಒಂದೇ ಪಾಶ್ರ್ವದಲ್ಲಿ ತಲೆ ನೋಯುತ್ತಿದ್ದರೆ, ನಾಲ್ಕೈದು ತೊಟ್ಟು ನುಗ್ಗೆ ಸೊಪ್ಪಿನ ರಸವನ್ನು ಎಡ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಬಲ ಕಿವಿಗೂ, ಬಲ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಎಡಕಿವಿಗೂ ಬಿಡುವುದರಿಂದ ಗುಣಮುಖ ಕಂಡುಬರುತ್ತದೆ. ಈ ಕ್ರಮವನ್ನು ದಿನಕ್ಕೆ ಒಂದಾವರ್ತಿಯಂತೆ ಮೂರು ದಿನಗಳವರೆಗೆ ಮಾಡುವುದು ಅಗತ್ಯ.

 

Facebook Comments

Sri Raghav

Admin