ಬ್ಲ್ಯಾಕ್ ಬೆರ್ರಿ

ಈ ಸುದ್ದಿಯನ್ನು ಶೇರ್ ಮಾಡಿ

ಬ್ಲ್ಯಾಕ್ ಬೆರ್ರಿ ಸೂಪರ್ ಫುಡ್ ಎಂಬುದು ಇತ್ತೀಚೆಗೆ ನಡೆಸಲಾದ ಅಧ್ಯಯನಗಳು ಮತ್ತು ಸಂಶೋಧನೆಗಳಿಂದ ದೃಢಪಟ್ಟಿದೆ. ರುಚಿಕರ ಮತ್ತು ಸ್ವಾದಿಷ್ಟ ಹಣ್ಣು ಇದು, ಜೊತೆಗೆ ಆರೋಗ್ಯವರ್ಧಕ. ವಿವಿಧ ಜÁತಿಗಳಲ್ಲಿ ಲಭಿಸುವ ಈ ಹಣ್ಣು ಇತ್ತೀಚಿನ ದಿನಗಳಲ್ಲಿ ತುಂಬಾ ಜನಪ್ರಿಯವಾಗಿದೆ. ಈ ಹಣ್ಣಿನಲ್ಲಿ ಹಲವಾರು ಔಷಧೀಯ ಗುಣಗಳಿವೆ.
ತೇವಾಂಶ, ಸಸಾರಜನಕ, ಮೇದಸ್ಸು, ಖನಿಜÁಂಶ, ಕಾರ್ಬೋಹೈಡ್ರೇಟ್ಸ್, ಸುಣ್ಣ, ಮೆಗ್ನಿಷಿಯಂ, ಫಾಸ್ಪರಸ್, ಕಬ್ಬಿಣ, ಸತು, ತಾಮ್ರ, ಕ್ಲೋರಿನ್, ಸೋಡಿಯಂ, ಆಕ್ಸಾಲಿಕ್ ಆಮ್ಲ, ಫೆÇೀಲಿಕ್ ಆಮ್ಲ, ಅಮೈನೋ ಆಮ್ಲಗಳು, ಪೆÇಟ್ಯಾಷಿಯಂ, ಥಿಯಾಮಿನ್, ಗಂಧಕ, ರಿಬೋಫ್ಲಾವಿನ್, ಎ, ಬಿ1, ಬಿ2, ಬಿ3 ಬಿ6, ಸಿ, ಇ, ಮತ್ತು ಜೀವಸತ್ವಗಳು ಸಮೃದ್ಧವಾಗಿವೆ.
ಜೀರ್ಣಕ್ರಿಯೆಗೆ ಇದು ಉತ್ತಮ ರೀತಿಯಲ್ಲಿ ನೆರವಾಗುತ್ತದೆ. ರೋಗ ಪ್ರತಿರೋಧಕ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಹೃದಯದ ಕಾರ್ಯನಿರ್ವಹಣೆಯನ್ನು ಸಮರ್ಪಕಗೊಳಿಸುತ್ತದೆ. ಕ್ಯಾನ್ಸರ್ ತಡೆಗಟ್ಟಲು ಇದು ಸಹಕಾರಿ. ವಯಸ್ಸಾದವರು ಈ ಹಣ್ಣನ್ನು ಸೇವಿಸಿದರೆ ಜÁ್ಞಪಕ ಶಕ್ತಿ ಹೆಚ್ಚಾಗುತ್ತದೆ. ಅವರಲ್ಲಿ ಅರಿವಿನ ಕೊರತೆಯನ್ನು ನಿವಾರಿಸುತ್ತದೆ. ಎಲ್ಲ ವಯೋಮಾನದವರ ಮೂಳೆಯನ್ನು ಸದೃಢಗೊಳಿಸುತ್ತದೆ. ಆರೋಗ್ಯಕರ ಚರ್ಮಕ್ಕೆ ಸಹಕಾರಿ, ದೃಷ್ಟಿಯನ್ನು ಸುಧಾರಿಸಿ ನೇತ್ರ ದೋಷಗಳನ್ನು ನಿವಾರಿಸುತ್ತದೆ. ತೂಕ ನಿಯಂತ್ರಣದಲ್ಲಿಯೂ ಇದು ನೆರವಾಗುತ್ತದೆ. ಶರೀರದಲ್ಲಿನ ಹಾನಿಕಾರಕ ಕೊಲೆಸ್ಟರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರು ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಶರೀರಕ್ಕೆ ಅಗತ್ಯವಾದ ಪೆÇೀಷಕಾಂಶಗಳು ಲಭಿಸುತ್ತವೆ.
ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಈ ಹಣ್ಣು ವಿವಿಧ ಕ್ಯಾನ್ಸರ್‍ನನ್ನು ತಡೆಗಟ್ಟಲು ಸಹಕಾರಿ. ಪಾಶ್ರ್ವವಾಯು ಮತ್ತು ಹೃದ್ರೋಗಗಳನ್ನು ಇದು ತಡೆಗಟ್ಟುತ್ತದೆ. ಬ್ಲ್ಯಾಕ್‍ಬೆರ್ರಿ ಹಣ್ಣನ್ನು ಫ್ರೂಟ್ ಸಾಲಡ್, ಫ್ರೂಟ್ ಸಾಲ್ಸಾ, ಐಸ್‍ಕ್ರೀಮ್ ಮತ್ತು ವಿವಿಧ ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

Facebook Comments

Sri Raghav

Admin