ರೈಲ್ವೆ ಸುರಕ್ಷತೆಗಾಗಿ ಆರ್‍ಎಫ್‍ಐಡಿ ಸಾಧನ ಅಳವಡಿಸಲು ರೈಲ್ವೆ ಇಲಾಖೆ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

RFID

ನವದೆಹಲಿ,ಮೇ.1-ಸುರಕ್ಷತಾ ಹಿನ್ನೆಲೆಯಲ್ಲಿ ರೈಲ್ವೆ ಇಂಜಿನ್, ಗೂಡ್ಸ್ ರೈಲು, ಕೋಚ್‍ಗಳಲ್ಲಿ ರೇಡಿಯೋ ಫ್ರಿಕ್ವೇನ್ಸಿ ಐಡೆಂಟಿಫಿಕೇಷನ್ ಟ್ಯಾಗ್ಸ್(ಆರ್‍ಎಫ್‍ಐಡಿ) ಸಾಧನ ಅಳವಡಿಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧರಿಸಿದೆ. ದೇಶಾದ್ಯಂತ 2.25 ಲಕ್ಷ ಗೂಡ್ಸ್ ರೈಲುಗಳು, 50 ಸಾವಿರ ಕೋಚ್‍ಗಳು ಮತ್ತು 9 ಸಾವಿರ ಇಂಜಿನ್‍ಗಳಿದ್ದು , ರೈಲ್ವೆ ಟ್ಯಾಗ್ಸ್ ಸಾಧನ ಅಳವಡಿಸಲು ತೀರ್ಮಾನಿಸಿದೆ. ಇದಕ್ಕೆ 57 ಕೋಟಿ ರೂ. ವೆಚ್ಚವಾಗಲಿದ್ದು, ಮೊದಲ ಹಂತದ ನಿಯಮ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಸಾರ್ವಜನಿಕ ಸಾರಿಗೆಗಳಿಗೂ ಕೂಡ ಅಳವಡಿಸಲು ಚಿಂತನೆ ನಡೆಸಲಾಗಿದೆ.ಕೇಂದ್ರ ರೈಲ್ವೆ ಮಾಹಿತಿ ಮಂಡಳಿ ಟ್ಯಾಗ್ಸ್ ವಿನ್ಯಾಸ ಮಾಡಲಿದ್ದು , ಪ್ರತಿ ಟ್ಯಾಗ್ಸ್‍ಗೆ 1000 ರೂ. ವ್ಯಯವಾಗುತ್ತದೆ. ರೈಲ್ವೆ ಸ್ಟೇಷನ್‍ಗಳಲ್ಲಿ ಟ್ಯಾಗ್ಸ್ ಸಾಧನಕ್ಕೆ ಸಂಬಂಧಪಟ್ಟ ತಂತ್ರಜ್ಞಾನವನ್ನು ಅಳವಡಿಸಿ ನೆಟ್‍ವರ್ಕ್ ಮೂಲಕ ಕೇಂದ್ರ ಕಂಪ್ಯೂಟರ್‍ಗೆ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ ಎಂದು ಇಲಾಖೆ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin