ಲೈಚಿ/ಲಿಚಿ (Lychee)

ಈ ಸುದ್ದಿಯನ್ನು ಶೇರ್ ಮಾಡಿ
ಲೈಚಿ/ಲಿಚಿ ಲಿಚಿ ಹಣ್ಣು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ತಡೆಗಟ್ಟುತ್ತದೆ. ಜೀರ್ಣಶಕ್ತಿ ವೃದ್ಧಿಸುತ್ತದೆ. ಸದೃಢ ಮೂಳೆಗಳನ್ನು ನಿರ್ಮಿಸುತ್ತದೆ. ರಕ್ತದ ಏರೋತ್ತಡ ಕಡಿಮೆ ಮಾಡುತ್ತದೆ. ವೈರಾಣುಗಳ ವಿರುದ್ಧ ದೇಹ ಹೋರಾಡಲು ನೆರವಾಗುತ್ತದೆ. ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ. ಚರ್ಮವನ್ನು ರಕ್ಷಿಸುತ್ತದೆ ಹಾಗೂ ಶರೀರದ ಚಯಾಪಚಯ ಚಟುವಟಿಕೆಗಳನ್ನು ಗರಿಷ್ಠಗೊಳಿಸುತ್ತದೆ.  ರೋಗ ಪ್ರತಿರೋಧಕ ಶಕ್ತಿ ವೃದ್ಧಿ: ಲೈಚಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುತ್ತದೆ. ಈ ಹಣ್ಣನ್ನು ಒಮ್ಮೆ ಸೇವಿಸಿದರೆ ಶರೀರಕ್ಕೆ ಅಗತ್ಯವಾದ ಆಸ್‍ಕೊರ್‍ಬಿಡ್ ಅಮ್ಲದ ಶೇ.100ರಷ್ಟು ದೈನಂದಿನ ಅಗತ್ಯವನ್ನು ಪೂರೈಸುತ್ತದೆ. ಕ್ಯಾನ್ಸರ್ ನಿಯಂತ್ರಣ: ಕ್ಯಾನ್ಸರ್ ತಡೆಗಟ್ಟುವಲ್ಲಿ ಲಿಚಿ ಹಣ್ಣು ಸಹಕಾರಿ.  ಇದರಲ್ಲಿರುವ ಪಾಲಿಫೆನೊಲಿಕ್ ಮತ್ತು ಪ್ರೊಯಾಂಥೋಸಯನಿಡಿನ್ಸ್ ರಾಸಾಯನಿಕ ಅಂಶಗಳು ವಿಟಿಮಿನ್ ಸಿಗಿಂತಲೂ ಬಲಿಷ್ಠವಾಗಿದ್ದು, ವಿವಿಧ ರೋಗಗಳು ಮತ್ತು ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ. ವಿವಿಧ ಕ್ಯಾನ್ಸರ್‍ಕಾರಕ ಧಾತುಗಳನ್ನು ಇದು ತಟಸ್ಥಗೊಳಿಸುವ ಸಾಮಥ್ರ್ಯ ಹೊಂದಿದೆ. ಅಲ್ಲದೆ, ಹೃದ್ರೋಗಗಳನ್ನು ತಡೆಗಟ್ಟುವಲ್ಲಿಯೂ ಇದು ಪ್ರಯೋಜನಕಾರಿ.  ರಕ್ತದೊತ್ತಡ ನಿಯಂತ್ರಣ: ಈ ಹಣ್ಣಿನಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿದ್ದು, ದೇಹದಲ್ಲಿನ ದ್ರವಗಳನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ.ಜತೆಗೆ ರಕ್ತದ ಏರೋತ್ತಡ ನಿಯಂತ್ರಿಸುತ್ತದೆ. ರಕ್ತ ನಾಳಗಳಲ್ಲಿ ಪ್ಲಾಕ್‍ಗಳು ನಿರ್ಮಾಣವಾಗುವುದನ್ನು ಇದು ತಡೆಗಟ್ಟುವ ಮೂಲಕ ಹೃದಯದ ಆರೋಗ್ಯ ಕಾಪಾಡುತ್ತದೆ. ಇದರಲ್ಲಿ ಸೋಡಿಯಂ ಸಹ ಇದೆ. ಇದು ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ಸರಿದೂಗಿಸುತ್ತದೆ.

ಲಿಚಿ ಹಣ್ಣು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ತಡೆಗಟ್ಟುತ್ತದೆ. ಜೀರ್ಣಶಕ್ತಿ ವೃದ್ಧಿಸುತ್ತದೆ. ಸದೃಢ ಮೂಳೆಗಳನ್ನು ನಿರ್ಮಿಸುತ್ತದೆ. ರಕ್ತದ ಏರೋತ್ತಡ ಕಡಿಮೆ ಮಾಡುತ್ತದೆ. ವೈರಾಣುಗಳ ವಿರುದ್ಧ ದೇಹ ಹೋರಾಡಲು ನೆರವಾಗುತ್ತದೆ. ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ. ಚರ್ಮವನ್ನು ರಕ್ಷಿಸುತ್ತದೆ ಹಾಗೂ ಶರೀರದ ಚಯಾಪಚಯ ಚಟುವಟಿಕೆಗಳನ್ನು ಗರಿಷ್ಠಗೊಳಿಸುತ್ತದೆ.ರೋಗ ಪ್ರತಿರೋಧಕ ಶಕ್ತಿ ವೃದ್ಧಿ: ಲೈಚಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ದೇಹಕ್ಕೆ ಅಗತ್ಯ ಪೋಷಕಾಂಶ ಒದಗಿಸುತ್ತದೆ. ಈ ಹಣ್ಣನ್ನು ಒಮ್ಮೆ ಸೇವಿಸಿದರೆ ಶರೀರಕ್ಕೆ ಅಗತ್ಯವಾದ ಆಸ್‍ಕೊರ್‍ಬಿಡ್ ಅಮ್ಲದ ಶೇ.100ರಷ್ಟು ದೈನಂದಿನ ಅಗತ್ಯವನ್ನು ಪೂರೈಸುತ್ತದೆ. ಕ್ಯಾನ್ಸರ್ ನಿಯಂತ್ರಣ: ಕ್ಯಾನ್ಸರ್ ತಡೆಗಟ್ಟುವಲ್ಲಿ ಲಿಚಿ ಹಣ್ಣು ಸಹಕಾರಿ. ಇದರಲ್ಲಿರುವ ಪಾಲಿಫೆನೊಲಿಕ್ ಮತ್ತು ಪ್ರೊಯಾಂಥೋಸಯನಿಡಿನ್ಸ್ ರಾಸಾಯನಿಕ ಅಂಶಗಳು ವಿಟಿಮಿನ್ ಸಿಗಿಂತಲೂ ಬಲಿಷ್ಠವಾಗಿದ್ದು, ವಿವಿಧ ರೋಗಗಳು ಮತ್ತು ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ. ವಿವಿಧ ಕ್ಯಾನ್ಸರ್‍ಕಾರಕ ಧಾತುಗಳನ್ನು ಇದು ತಟಸ್ಥಗೊಳಿಸುವ ಸಾಮಥ್ರ್ಯ ಹೊಂದಿದೆ. ಅಲ್ಲದೆ, ಹೃದ್ರೋಗಗಳನ್ನು ತಡೆಗಟ್ಟುವಲ್ಲಿಯೂ ಇದು ಪ್ರಯೋಜನಕಾರಿ.ರಕ್ತದೊತ್ತಡ ನಿಯಂತ್ರಣ: ಈ ಹಣ್ಣಿನಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿದ್ದು, ದೇಹದಲ್ಲಿನ ದ್ರವಗಳನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ.ಜತೆಗೆ ರಕ್ತದ ಏರೋತ್ತಡ ನಿಯಂತ್ರಿಸುತ್ತದೆ. ರಕ್ತ ನಾಳಗಳಲ್ಲಿ ಪ್ಲಾಕ್‍ಗಳು ನಿರ್ಮಾಣವಾಗುವುದನ್ನು ಇದು ತಡೆಗಟ್ಟುವ ಮೂಲಕ ಹೃದಯದ ಆರೋಗ್ಯ ಕಾಪಾಡುತ್ತದೆ. ಇದರಲ್ಲಿ ಸೋಡಿಯಂ ಸಹ ಇದೆ. ಇದು ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ಸರಿದೂಗಿಸುತ್ತದೆ.
Facebook Comments

Sri Raghav

Admin