ಸೇನಾ ನೆಲೆ ಮೇಲೆ ಪಾಕ್ ರಾಕೆಟ್ ದಾಳಿ, ಮೂವರು ಯೋಧರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

border

ಜಮ್ಮು, ಮೇ 1- ಕಾಶ್ಮೀರ ಕಣಿವೆಯಲ್ಲಿ ಒಂದೆಡೆ ಉಗ್ರರ ಅಟ್ಟಹಾಸ, ಇನ್ನೊಂದೆಡೆ ಪಾಕಿಸ್ತಾನಿ ಯೋಧರ ಕ್ಯಾತೆ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನ ರೇಂಜರ್‍ಗಳು ಕದನ ವಿರಾಮ ಉಲ್ಲಂಘಿಸಿ ನಡೆಸಿದ ರಾಕೆಟ್ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಈ ಅಪ್ರಚೋದಿತ ದಾಳಿಯಲ್ಲಿ ಇನ್ನೂ ಕೆಲವು ಸೈನಿಕರು ಗಾಯಗೊಂಡಿದ್ದಾರೆ.   ಪೂಂಚ್ ಜಿಲ್ಲೆಯ ಕೃಷ್ಣಘಾಟಿ ಬಳಿ ಗಡಿ ನಿಯಂತ್ರಣ ರೇಖೆಯಲ್ಲಿನ ಬಿಎಸ್‍ಎಫ್‍ನ ಮುಂಚೂಣಿ ರಕ್ಷಣಾ ಸ್ಥಳದ (ಎಫ್‍ಡಿಎಲ್) ನೆಲೆ ಪಾಕಿಸ್ತಾನಿ ಸೈನಿಕರು ಇಂದು ಬೆಳಗ್ಗೆ ನಡೆಸಿದ ರಾಕೆಟ್ ದಾಳಿಯಲ್ಲಿ ಗಡಿ ಭದ್ರತಾ ಪಡೆಯ ಮತ್ತು ಓರ್ವ ಸೇನಾ ಜಿಸಿಓ ಮತ್ತು ಬಿಎಸ್‍ಎಫ್ ಪೇದೆ ಹುತಾತ್ಮರಾಗಿದ್ದರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆಯ ಪಹರೆಗೆ ನಿಂತಿರುವ ಬಾರತೀಯ ಪಡೆಗಳು ಪ್ರತಿ ದಾಳಿ ನಡೆಸಿ ದಿಟ್ಟ ಉತ್ತರ ನೀಡಿವೆ.



ಪಾಕಿಸ್ತಾನಿ ಯೋಧರು ಕದನ ವಿರಾಮ ಉಲ್ಲಂಘಿಸಿ ರಾಕೆಟ್‍ಗಳು ಮತ್ತು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಆಕ್ರಮಣ ನಡೆಸಿದರು. ಗಾಯಗೊಂಡಿರುವ ಯೋಧರಲ್ಲಿ ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ಹೇಳಿದ್ದಾರೆ.   ಪಾಕಿಸ್ತಾನ ಸೇನಾ ಪಡೆಗಳು ಕಳೆದ ತಿಂಗಳು ಪೂಂಚ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಏಳು ಬಾರಿ ಕದನ ವಿರಾಮ ಉಲ್ಲಂಘಿಸಿದೆ.

ಪಾಕ್ ಕೃತ್ಯಕ್ಕೆ ಖಂಡನೆ :

ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ದಾಳಿಯಿಂದ ಇಬ್ಬರು ಯೋಧರು ಪ್ರಾಣ ಕಳೆದುಕೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಭಾರತ, ಪಾಕ್ ಕೃತ್ಯವನ್ನು ಖಂಡಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin