ಅಸಹಿಷ್ಣುತೆ, ಕೋಮುವಾದಿ ಅಸಮಾನತೆ ತಾಂಡವಾಡುತ್ತಿವೆ : ನಿಡುಮಾಮಿಡಿ ಶ್ರೀ

ಈ ಸುದ್ದಿಯನ್ನು ಶೇರ್ ಮಾಡಿ

Nidumamidi--01

ಬೆಂಗಳೂರು. ಮೇ.2- ಅಸಹಿಷ್ಣುತೆ, ಕೋಮುವಾದಿ, ಜಾತಿ-ಜಾತಿ ನಡುವೆ ಕಚ್ಚಾಟ, ಬಡತನ, ಅಸಮಾನತೆ, ಅನ್ಯಾಯ ಸೇರಿದಂತೆ ಆನೇಕ ಸಮಸ್ಯೆಗಳು ಭಾರತದಲ್ಲಿ ತಾಂಡವಾಡುತ್ತಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮಿಜೀ ವಿಷಾಧ ವ್ಯಕ್ತಪಡಿಸಿದರು.   ಭಾರತೀಯ ಇಸ್ಲಾಮಿಕ್ ವಿದ್ಯಾರ್ಥಿಗಳ ಸಂಸ್ಥೆಯು ಪತ್ರಿಕಾಗೋಷ್ಠಿಯಲ್ಲಿ ಆಯೋಜಿಸಿದ್ದ ಭಾರತ ಒಂದು, ಹಲವು ಧರ್ಮಗಳು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬರುವ ಮುನ್ನ ಎಲ್ಲಾ ಭಾರತೀಯರು ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಕೋಮು ಸಂಘರ್ಷ, ಅಸಹಿಷ್ಣುತೆ ಸೇರಿದಂತೆ ಆನೇಕ ಸಮಸ್ಯೆಗಗಳು ದೇಶದಲ್ಲಿ ಉದ್ಬವಿಸಿದೆ. ಇದನ್ನು ಕಿತ್ತುಗ್ಯೊಯಲು ಪತ್ರಿಯೊಬ್ಬರು ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.

ಇದೀಗ ಕೆಲವು ರಾಜಕೀಯ ಪಕ್ಷಗಳು ಅಧಿಕಾರದ ಆಸೆಗಾಗಿ ಜಾತಿ ಹೊಡೆಯುವ ಕೆಲಸ ನಡೆಯುತ್ತಿದೆ. ಪ್ರತಿಯೊಂದು ಪಕ್ಷವು ಆಯಾಯಾ ಜಾತಿಗಳ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.  ದೇಶದಲ್ಲಿ ಆಳವಾಗಿ ಜಾತಿಗಳ ಬೇರು ಬಿಟ್ಟಿದೆ. ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರಲು ಜಾತಿ ಹೆಸರಿನಲ್ಲಿ ಪ್ರಚಾರ ಮಾಡಿ ಮತವನ್ನು ಸಳೆಯಲು ಪ್ರಯತ್ನಿಸುತ್ತಿವೆ. ಅಧಿಕಾರಕ್ಕೆ ಬಂದರೆ ನಿಮ್ಮ ಪಂಗಡಕ್ಕೆ ಹೆಚ್ಚು ಅಭಿವೃದ್ಧಿ ಮಾಡುತ್ತೇನೆ ಎಂದು ಜನರನ್ನು ನಂಬಿಸಿ ಮುರ್ಖರನ್ನಾಗಿ ಮಾಡುತ್ತಾರೆ. ಇಂತಹ ದೃಷ್ಠಿಕೋನ ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ತಾರತಮ್ಯ ಹೋಗಲಾಡಿಸಿ ನಾವೆಲ್ಲರೂ ಒಂದೇ ಭಾವನೆಯಿಂದ ಬದುಕಿದರೆ ಯಾವುದೇ ಘರ್ಷಣೆ, ಅನಾಹುತ, ಸಾವು-ನೋವು ಸಂಭವಿಸುವುದಿಲ್ಲ. ಹೀಗಾಗಿ ಈ ಮನೋಭಾವನೆಯನ್ನು ಜನರು ಬೆಳೆಸಿಕೊಂಡು ಸೌಹಾರ್ದತೆಯುತವಾಗಿ ಬದುಕಬೇಕು ಎಂದು ಸಲಹೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin