ಇಸ್ಲಾಂ ವಿರುದ್ಧ ಕಾರ್ಯಕ್ರಮ ಪ್ರಸಾರ : ಜೆಮ್ ಟಿವಿ ಮಾಲೀಕನ ಗುಂಡಿಟ್ಟು ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

TV-Channel

ಟೆಹರಾನ್, ಮೇ 2-ಪರ್ಷಿಯನ್ ಭಾಷೆಯ ಜೆಮ್ ಟೆಲಿವಿಷನ್ ಸಂಸ್ಥೆಯ ಸಂಸ್ಥಾಪಕ ಸಯೀದ್ ಕರೀಮಿ (45) ಮತ್ತು ಅವರ ಪಾಲುದಾರನನ್ನು ಟರ್ಕಿಯ ಇಸ್ತಾನ್‍ಬುಲ್‍ನಲ್ಲಿ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಕುವೈತ್‍ನ ವಾಣಿಜ್ಯ ಪಾಲುದಾರರೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಹತ್ಯೆ ನಡೆದಿದೆ.   ಮುಖವಾಡ ಧರಿಸಿದ್ದ ಹಂತಕರು ಇಬ್ಬರನ್ನು ಕೊಂದು ಪರಾರಿಯಾಗಿದ್ದಾರೆ. ಕಗ್ಗೊಲೆ ನಂತರ ಕರೀಂ ಪ್ರಯಾಣಿಸುತ್ತಿದ್ದ ಕಾರು ಹೊತ್ತಿ ಉರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹತ್ಯೆ ಹಿಂದೆ ಉಗ್ರಗಾಮಿಗಳ ಕೈವಾಡ ಇದೆ ಎಂದು ಶಂಕಿಸಲಾಗಿದೆ.ಕರೀಮಿ ಈ ಹಿಂದೆ ಇರಾನ್ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ನ್ಯಾಯಾಲಯವೊಂದು ಅವರಿಗೆ ಆರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.   ಮಧ್ಯಪ್ರಾಚ್ಯ ಮತ್ತು ಮುಸ್ಲಿಂ ದೇಶಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಜೆಮ್ ಟಿವಿ ಪ್ರಸಾರ ಮಾಡುತ್ತದೆ. ಇವುಗಳಲ್ಲಿ ಕೆಲವು ಇಸ್ಲಾಂ ಧರ್ಮಕ್ಕೆ ವಿರೋಧವಾಗಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿ ಪ್ರಸಾರಕ್ಕಾಗಿ ಕರೀಮಿ ತನ್ನ ಚಾನೆಲ್ ಬಳಸುತ್ತಿದ್ದರು ಎಂದು ಇರಾನ್ ಆರೋಪಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin