ತನ್ವೀರ್‍ಸೇಠ್ ಮೇಲಿನ ಆರೋಪ ಸುಳ್ಳು : ಬಲವಾಗಿ ಸಮರ್ಥಿಸಿಕೊಂಡ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--Tanveer-Sait

ಬೆಂಗಳೂರು, ಮೇ 2- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ಅವರ ಮೇಲಿನ ಗ್ರಂಥಾಲಯ ಲಂಚ ಆರೋಪದ ಹಿಂದೆ ರಾಜಕೀಯ ಇರುವ ಶಂಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ನಗರದ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಆವರಣದಲ್ಲಿ ಇನ್ಫೋಸಿಸ್ ಫೌಂಡೇಶನ್‍ನ ದೇಣಿಗೆಯಿಂದ ನಿರ್ಮಿಸುತ್ತಿರುವ ಧರ್ಮಶಾಲಾ ಕಟ್ಟಡಕ್ಕೆ ಶಿಲಾನ್ಯಾಸ  ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಂಥಾಲಯ ಮೇಲ್ವಿಚಾರಕರಿಂದ ಲಂಚ ಪಡೆದ ಆರೋಪಕ್ಕೆ ಗುರಿಯಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡರು.ಯಾರು ಬೇಕಾದರೂ ಯಾರ ಮೇಲಾದರೂ ಆರೋಪ ಮಾಡಬಹುದು. ಆದರೆ, ಅದನ್ನು ಸಾಬೀತುಪಡಿಸಬೇಕು. ಎಲ್ಲರೂ ಆರೋಪ ಮಾಡುತ್ತಾರೆ. ಅದು ಸುಳ್ಳೋ, ನಿಜವೋ ಎಂಬುದನ್ನು ತಿಳಿಯಬೇಕಿದೆ.   ತನ್ವೀರ್‍ಸೇಠ್ ಅವರ ಮನೆಯ ಮುಂದೆ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಪ್ರತಿಭಟನೆ ಹಿಂದೆ ರಾಜಕಾರಣ ಇದೆ ಎಂಬುದನ್ನು ನೋಡಬೇಕಿದೆ ಎಂದರು.  ಕಾಂಗ್ರೆಸ್ ಒಳ ಮೈತ್ರಿಗೆ ಮುಖ್ಯಮಂತ್ರಿ ಕಚೇರಿಯಿಂದಲೇ ಸಿದ್ದತೆಗಳು ನಡೆಯುತ್ತಿವೆ ಮತ್ತು ತಮಗೆ ಅನುಕೂಲಕರವಾದ ಸುದ್ದಿಗಳನ್ನು ಮುಖ್ಯಮಂತ್ರಿ ಕಚೇರಿಯಿಂದಲೇ ಸೃಷ್ಟಿಸಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಸಿದ್ದರಾಮಯ್ಯ ಅವರು, ನಾವೇಕೆ ಅಂತಹ ಕೆಲಸ ಮಾಡೋಣ, ಅದರಿಂದ ನಮಗೇನು ಲಾಭವಿದೆ ಎಂದು ಮರುಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಾಡುತ್ತಿರುವ ಆರೋಪಗಳು ಆಧಾರ ರಹಿತ ಮತ್ತು ಸುಳ್ಳು ಎಂದರು.

ವಿಧಾನಪರಿಷತ್‍ಗೆ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ಪಟ್ಟಿ ಕಳುಹಿಸಲಾಗಿದೆ. ಸಚಿವ ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಜತೆ ಚರ್ಚೆ ನಡೆಸುವುದಾಗಿ ಇದೇ ವೇಳೆ ಸಿಎಂ ತಿಳಿಸಿದರು.  ರಾಜ್ಯ ಕಾಂಗ್ರೆಸ್‍ನ ಉಸ್ತುವಾರಿ ಬದಲಾವಣೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನೂತನ ಉಸ್ತುವಾರಿ ನಾಯಕ ವೇಣುಗೋಪಾಲ್ ಅವರು ನಾನು ದುಬೈನಲ್ಲಿದ್ದಾಗ ಪೋನ್ ಮಾಡಿದ್ದರು, ಎಐಸಿಸಿಯಿಂದ ಸಭೆ ನಿಗದಿಯಾಗಿದ್ದು, ಸಭೆ ಮುಗಿದ ನಂತರ ಕರ್ನಾಟಕಕ್ಕೆ ಬರುವುದಾಗಿ ತಿಳಿಸಿದ್ದಾರೆ. ಅವರ ಬರುವಿಕೆಯ ನಿರೀಕ್ಷೆಯಲ್ಲಿದ್ದೇವೆ ಎಂದರು. ಎಐಸಿಸಿ ಮಹಾಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸುವ ಪ್ರಸ್ತಾವನೆ ಸಧ್ಯಕ್ಕೆ ನಮ್ಮ ಮುಂದೆ ಇಲ್ಲ. ಹೈಕಮಾಂಡ್‍ನಿಂದ ಯಾವ ಪ್ರಸ್ತಾವನೆಗಳು ಬಂದಿಲ್ಲ  ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin