ರೋಗಿಗಳಿಗೆ ಹಣ್ಣು ಹಂಚುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಜೆಡಿಎಸ್ ಕಾರ್ಯಕರ್ತರು

ಈ ಸುದ್ದಿಯನ್ನು ಶೇರ್ ಮಾಡಿ

kanakapura

ಕನಕಪುರ, ಮೇ 2- ಜೆಡಿಎಸ್ ಯುವ ಮುಖಂಡ ಹಾಗೂ ನಗರಸಭಾ ಮಾಜಿ ಸದಸ್ಯ ಪೈಲ್ವಾನ್ ಪುಟ್ಟರಾಜುರವರ 36ನೆ ಹುಟ್ಟುಹಬ್ಬವನ್ನು ಕನಕಪುರ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಣ್ಣು-ಹಂಪಲು ವಿತರಿಸುವ ಮೂಲಕ ಆಚರಿಸಿಕೊಳ್ಳಲಾಯಿತು.
ಮಾಜಿ ಶಾಸಕ ಕೆ.ಎಲ್. ಶಿವಲಿಂಗೇಗೌಡ ಮತ್ತು ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣಗೌಡರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಲಹಳ್ಳಿ ವೆಂಕಟರಮಣಸ್ವಾಮಿ ದೇವಾಲಯ ಹಾಗೂ ಸಾತನೂರು ಮಹದೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.

ಕೋಡಿಹಳ್ಳಿ ಪುಟ್ಟಸ್ವಾಮಿಗೌಡ, ಕೃಷ್ಣಪ್ಪ, ಸಾತನೂರು ಹಿರಿಯ ಮುಖಂಡ ಎಸ್.ಎಸ್. ಪರಶಿವಯ್ಯ (ತಂಬಿಶೆಟ್ಟರು), ಸಾತನೂರು ಉಮೇಶ್, ಮಹೇಂದ್ರ, ಬಲರಾಂ, ತುಂಗಣಿ ಪುಟ್ಟಸ್ವಾಮಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಹಲಸೂರು ಸಿದ್ದರಾಜು, ಅಚ್ಚಲು ಎ.ಸಿ. ಶಿವರಾಜು, ತೊಪ್ಪಗನಹಳ್ಳಿ ರಾಜಗೋಪಾಲ್, ಬಿ.ಎಸ್.ದೊಡ್ಡಿ ಜಯರಾಮೇಗೌಡ, ಕುರಿಗೌಡನದೊಡ್ಡಿ ಕುಮಾರ, ಚಿಕ್ಕಾಲಹಳ್ಳಿ ಲೋಕೇಶ್, ಗೇರಳ್ಳಿ ರಾಜೇಶ್, ಮುಳ್ಳಳ್ಳಿ ಮಹೇಶ್, ಎಚ್.ಡಿ.ಕುಮಾರಸ್ವಾಮಿ ಬಳಗದ ಕಾರ್ಯಕರ್ತರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin