ಸಂತೆಕೋಡಿಹಳ್ಳಿಯಲ್ಲಿ ನಡೆದ ಉಚಿತ ಬಂಜೆತನ ನಿವಾರಣಾ ಶಿಬಿರ

ಈ ಸುದ್ದಿಯನ್ನು ಶೇರ್ ಮಾಡಿ

kanakapura-2

ಕನಕಪುರ, ಮೇ 2- ತಾಲೂಕಿನ ಸಂತೆಕೋಡಿಹಳ್ಳಿ ಗ್ರಾಮದಲ್ಲಿ ಕನಕಪುರ ರೋಟರಿ ಹಾಗೂ ಗ್ರಾಮ ಪಂಚಾಯತಿ ಮತ್ತು ಗರ್ಭಗುಡಿ ಐವಿಎಫ್ ಸಂಸ್ಥೆ ಆಶ್ರಯದಲ್ಲಿ ಉಚಿತ ಬಂಜೆತನ ನಿವಾರಣಾ ಶಿಬಿರ ಏರ್ಪಡಿಸಲಾಗಿತ್ತು.ಗರ್ಭಗುಡಿ ಐವಿಎಫ್ ಸಂಸ್ಥೆ ಬಂಜೆತನ ನಿವಾರಣಾ ತಜ್ಞ ಡಾ.ಆಶಾ ಎಸ್.ವಿಜಯ್ ಮಾತನಾಡಿ, ಗ್ರಾಮೀಣ ಪ್ರದೇಶದ ಅನೇಕ ಕುಟುಂಬದ ದಂಪತಿಗಳಲ್ಲಿ ಬಂಜೆತನ ತಮ್ಮನ್ನು ಕಾಡುತ್ತಿದ್ದರೂ ಇನ್ನೂ ಮೂಢನಂಬಿಕೆಗಳ ಕಟ್ಟುಪಾಡಿನಲ್ಲಿ ಮುಂದುವರೆಯುತ್ತ ಸಮಯ ಕಳೆಯುತ್ತಿದ್ದಾರೆ. ಇದನ್ನು ನಿರ್ಲಕ್ಷಿಸದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಶಿಬಿರದಲ್ಲಿ 60ಕ್ಕೂ ಹೆಚ್ಚು ಮಂದಿ ದಂಪತಿಗಳು ಆಗಮಿಸಿ ಉಚಿತ ಚಿಕಿತ್ಸೆ ಮತ್ತು ಸಲಹೆ ಪಡೆದುಕೊಂಡರು. ರೋಟರಿ ಮಾಜಿ ಅಧ್ಯಕ್ಷ ಭಾನುಪ್ರಕಾಶ್, ಗರ್ಭಗುಡಿ ಸಂಸ್ಥೆಯ ಸಿಇಒ ವಿಜಯ್‍ಕುಮಾರ್, ಶಾಲಾ ಮುಖ್ಯೋಪಾಧ್ಯಾಯ ಮಠಪತಿ ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin