2,313 ಕೋಟಿ ರೂ.ನಷ್ಟದಲ್ಲಿ ಆ್ಯಪ್ ಆಧಾರಿತ ಓಲಾ ಟ್ಯಾಕ್ಸಿ ಕಂಪೆನಿ

ಈ ಸುದ್ದಿಯನ್ನು ಶೇರ್ ಮಾಡಿ

Ola-Taxi--01

ನವದೆಹಲಿ, ಮೇ 2- ದೇಶದಲ್ಲಿ ಆಪ್ ಆಧಾರಿತ ನಗರ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಓಲಾ ಕಂಪನಿ ಸುಮಾರು 2,313.6 ಕೋಟಿ ರೂಪಾಯಿ ನಷ್ಟದಲ್ಲಿದೆ. ಹಾಗಂತ ಕಂಪನಿ ತನ್ನ ವಾರ್ಷಿಕ ಲೆಕ್ಕಪತ್ರದಲ್ಲಿ ಹೇಳಿಕೊಂಡಿದೆ. ಸಲ್ಲಿಕೆಯಾಗಿರುವ ಕಳೆದ ಹಣಕಾಸು ವರ್ಷದ (ಮಾ 31, 2016) ಲೆಕ್ಕಪತ್ರಗಳಲ್ಲಿ ಓಲಾ ಲೆಕ್ಕಾಚಾರ ಬಹಿರಂಗವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಂಪನಿಯ ನಷ್ಟ ಮೂರು ಪಟ್ಟು ಹೆಚ್ಚಾಗಿದೆ. ತಂತ್ರಜ್ಞಾನ, ಮಾರುಕಟ್ಟೆ ವಿಸ್ತರಣೆ ಹಾಗೂ ಸಂಬಳಗಳ ಮೇಲೆ ಹೆಚ್ಚು ಹಣವನ್ನು ವಿನಿಯೋಗಿಸಿದ ಹಿನ್ನೆಲೆಯಲ್ಲಿ ಈ ಪ್ರಮಾಣದ ನಷ್ಟವಾಗಿದೆ ಎಂದು ಕಂಪನಿ ತಿಳಿಸಿದೆ. ಸದ್ಯ ಭಾರತದಲ್ಲಿ ಓಲಾ ತನಗೆ ಪೈಪೋಟಿ ನೀಡುತ್ತಿರುವ ಮತ್ತೊಂದು ಅಂತಾರಾಷ್ಟ್ರೀಯ ಟಾಕ್ಸಿ ಸೇವಾ ಕಂಪನಿ ಉಬರ್ ಜತೆ ಮಾರುಕಟ್ಟೆಯ ಸೆಣಸಾಟ ನಡೆಸುತ್ತಿದೆ. ಹೀಗಾಗಿ, ಸಾರ್ವಜನಿಕರ ಪ್ರಯಾಣದಲ್ಲಿ ಭಾರಿ ರಿಯಾಯಿತಿ ನೀಡುತ್ತಿರುವುದು ಕಂಪನಿಯ ನಷ್ಟಕ್ಕೆ ಕಾರಣ ಎಂದು ಲೆಕ್ಕಪತ್ರದಲ್ಲಿ ಹೇಳಲಾಗಿದೆ.ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ಓಲಾ ಲೆಕ್ಕಪತ್ರಗಳ ಅನುಸಾರ, ಕಂಪನಿ ಮೂರು ಪಟ್ಟು ನಷ್ಟವನ್ನು ಅನುಭವಿಸಿದೆ. ಅದೇ ವೇಳೆ, ಕಂಪನಿಯ ಆದಾಯ ಗಳಿಕೆಯ ಸಾಧ್ಯತೆಯನ್ನೂ ತೋರಿಸಿದೆ. ಕಳೆದ ವರ್ಷ 103. 7 ಕೋಟಿ ಆದಾಯ ಗಳಿಕೆಯನ್ನು ತೋರಿಸಿದ್ದ ಕಂಪನಿ, ಈ ಬಾರಿ 7 ಪಟ್ಟು ಹೆಚ್ಚಿನ ಆದಾಯವನ್ನು ತೋರಿಸಿದೆ. ಸದ್ಯ ಓಲಾ ವಾರ್ಷಿಕ ಆದಾಯ 758. 2 ಕೋಟಿ ಎಂದು ಲೆಕ್ಕಪತ್ರಗಳು ಹೇಳುತ್ತಿವೆ.ಸದ್ಯ ಓಲಾ ಕಂಪನಿಯು ಸಂಬಳಗಳಿಗಾಗಿ ವಾರ್ಷಿ 381 ಕೋಟಿ, ಜಾಹೀರಾತಿಗಾಗಿ 437 ಕೋಟಿ ಹಾಗೂ ತಂತ್ರಜ್ಞಾನದ ಮೇಲೆ 120 ಕೋಟಿ ರೂ.ಗಳನ್ನು ವಿನಿಯೋಗ ಮಾಡಿದೆ.ಇತ್ತೀಚೆಗೆ ಓಲಾ ಮತ್ತು ಉಬರ್ ಕಂಪನಿಗಳು ತನ್ನ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಚಾಲಕರಿಗೆ ನೀಡುತ್ತಿದ್ದ ಹೆಚ್ಚುವರಿ ಪ್ರೋ ಧನವನ್ನು ಕಡಿತ ಮಾಡಿದ್ದವು. ಇದರಿಂದ ಬೆಂಗಳೂರು ಸೇರಿದಂತೆ ಹಲವು ನಗರಗಳನ್ನು ಪ್ರತಿಭಟನೆಗಳು ನಡೆದಿದ್ದವು.

ಆದರೆ, ಕಂಪನಿಗಳು ಚಾಲಕ ಅವಹಾಲುಗಳನ್ನು ಸ್ವೀಕರಿಸದೆ, ಗಟ್ಟಿ ನಿಲುವು ತಳೆದಿದ್ದವು. ಇದು ಬೆಂಗಳೂರಿನಲ್ಲಿ ಸ್ವತಂತ್ರ ಆಪ್ ಆಧಾರಿತ ಟ್ಯಾಕ್ಸಿ ಸೇವೆ ಆರಂಭಕ್ಕೆ ಮುನ್ನಡಿ ಬರೆದಿದೆ. ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ನೇತೃತ್ವ ದಲ್ಲಿ ಟ್ಯಾಕ್ಸಿ ಸೇವೆಯೊಂದು ಆರಂಭ ವಾಗಲಿದೆ ಎಂಬ ವರದಿಗಳಿವೆ.

ನಗರ ಸಾರಿಗೆ ವ್ಯವಸ್ಥೆಗಳು ಪ್ರಬಲವಾಗಿರದ ನಗರಗಳಲ್ಲಿ ಓಲಾ ಮತ್ತು ಉಬರ್‍ನಂತಹ ಅಂತಾರಾಷ್ಟ್ರೀಯ ಆಪ್ ಆಧಾರಿತ ಟ್ಯಾಕ್ಸಿ ಸೇವಾ ಕಂಪನಿಗಳಿಗೆ ಗ್ರಾಹಕರು ಮೊರೆ ಹೋಗುತ್ತಿದ್ದಾರೆ. ಇದೇ ಮಾದರಿ ಹಲವು ಟ್ಯಾಕ್ಸಿ ಕಂಪನಿ ಗಳು ಕಾರ್ಯಾಚರಣೆ ಆರಂಭಿಸದ ವಾದರೂ, ಈ ಎರಡು ಕಂಪನಿಗಳ ಭಾರಿ ಹೂಡಿಕೆಯಿಂದಾಗಿ ಪೈಪೋಟಿ  ನೀಡಲಾಗದೆ ಮಾರಿ ಕೊಂಡವು. ಇನ್ನು ಕೆಲವು ಮುಚ್ಚಿ ಹೋದವು. ಇದೀಗ ಓಲಾ ಮತ್ತು ಉಬರ್ ನಗರ ಟ್ಯಾಕ್ಸಿ ಮಾರುಕಟ್ಟೆಯನ್ನು ಆಳುತ್ತಿವೆ.
ಪ್ರಯಾಣಿಕರಿಗೆ ಜೇಬಿಗೆ ಭಾರ:

ಆರಂಭದಲ್ಲಿ ಓಲಾದಲ್ಲಿ ಪ್ರಯಾಣಿಸಿದ ದೂರಕ್ಕೆ ಮಾತ್ರ ಹಣ ತೆರಬೇಕಾಗಿತ್ತು. ಆದರೆ ಈಗ ಪ್ರಯಾಣಿಸಿದ ಅವಧಿಗೂ ಹಣ ಕೇಳುತ್ತದೆ. ಪ್ರಯಾಣದ ಅವಧಿಯ ಪ್ರತಿ ನಿಮಿಷಕ್ಕೂ 1 ರೂಪಾಯಿಯಂತೆ ಓಲಾ ಚಾರ್ಜ್ ಮಾಡುತ್ತದೆ. ಅಂದರೆ, ಬೆಂಗಳೂರಿನ ಟ್ರಾಫಿಕ್ನಿಂದಾಗಿ ರಸ್ತೆ ಜಾಮ್ ಆದರೆ, ಆ ಅವಧಿಗೂ ಪ್ರಯಾಣಕ ಜೇಬಿನಿಂದ ಹಣ ಪೀಕಲಾಗುತ್ತದೆ. ಇಂತಹದೊಂದು ವಿಚಿತ್ರ ದರ ಪಟ್ಟಿಯನ್ನು ಸಾರಿಗೆ ಇಲಾಖೆಯ ಕಾನೂನು ಮಾನ್ಯ ಮಾಡುವುದಿಲ್ಲ. ಓಲಾ ಪ್ರಯಾಣದ ಅವಧಿಗೂ ದರ ವಿಧಿಸುತ್ತಿದೆ ಎಂದು ನಮ್ಮ ಗಮನಕ್ಕೆ ಬಂದಿದೆ. ಆದರೆ, ಅದು ಕಾನೂನಿಗೆ ವಿರುದ್ಧವಾದುದು ಎನ್ನುತ್ತಾರೆ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು. ಹೀಗೆ, ಸಾರಿಗೆ ಇಲಾಖೆ ಹೇಳುತ್ತದಾರೂ ಈ ಕುರಿತು ಕಠಿಣ ಕ್ರಮ ಈವರೆಗೂ ತೆಗೆದು ಕೊಂಡಿಲ್ಲ ಎಂಬುದು ವಾಸ್ತವ.
ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಶೇರಿಂಗ್ ಸೇವೆಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಸಾರಿಗೆ ಇಲಾಖೆ `ಶೇರಿಂಗ್’ ಸೇವೆಯನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿತ್ತು. ಆದರೆ ಹೆಚ್ಚಿರುವ ಗ್ರಾಹಕರ ಬೇಡಿಕೆ ಹಿನ್ನೆಲೆಯಲ್ಲಿ ಇನ್ನೂ ಸೇವೆ ಜಾರಿಯಲ್ಲಿದೆ.ಸಾರ್ವಜನಿಕ ಸಾರಿಗೆ ಗಳನ್ನು ಸಮರ್ಥವಾಗಿ, ಯೋಜನಾ ಬದ್ಧವಾಗಿ ನಿರ್ವಹಣೆ ಮಾಡದೆ ಇರುವ ಹಿನ್ನೆಲೆಯಲ್ಲಿ ನಗರ ಪ್ರಯಾಣಕ್ಕೆ ಟ್ಯಾಕ್ಸಿ ಸೇವೆ ಅನಿವಾರ್ಯ ಎನ್ನಿಸಿವೆ. ಜನರ ಜೇಬಿಗೂ ಕತ್ತರಿ ಬೀಳುತ್ತಿದೆ. ಹೀಗಿದ್ದೂ, ಓಲಾ ಕಂಪನಿ ಸುಮಾರು 2 ಸಾವಿರ ನಷ್ಟವನ್ನು ತೋರಿಸಿರು ವುದು ಅಚ್ಚರಿಗೆ ಕಾರಣವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin