ದಿಡ್ಡಳ್ಳಿ ಗಿರಿಜನರ ಹೋರಾಟಕ್ಕೆ ಟ್ವಿಸ್ಟ್, ತೆರವಾಗಿದ್ದ ಜಾಗದಲ್ಲೇ ಮತ್ತೆ ರಾತ್ರೋರಾತ್ರಿ ಗುಡಿಸಲುಗಳ ನಿರ್ಮಾಣ

ಈ ಸುದ್ದಿಯನ್ನು ಶೇರ್ ಮಾಡಿ

Diddalli--01

ಕೊಡಗು, ಮೇ 3- ಕೊಡಗಿನ ದಿಡ್ಡಳ್ಳಿ ಗಿರಿಜನರ ಹೋರಾಟಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ರಾತ್ರೋರಾತ್ರಿ ಕಾಡಿನಲ್ಲಿ ಆದಿವಾಸಿಗಳು ಮತ್ತೆ ಗುಡಿಸಲು ಕಟ್ಟಿದ್ದಾರೆ. ಆರು ತಿಂಗಳ ಹಿಂದೆ ತೆರವಾಗಿದ್ದ ಜಾಗದಲ್ಲೇ ಮತ್ತೆ ಗುಡಿಸಲುಗಳನ್ನು ನಿರ್ಮಾಣ ಮಾಡಿದ್ದಾರೆ. ದೇವಮಚ್ಚಿ ಮೀಸಲು ಅರಣ್ಯದಲ್ಲಿ ಮತ್ತೆ ಗುಡಿಸಲು ನಿರ್ಮಾಣ ಮಾಡಿ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆಗೆ ಆದಿವಾಸಿಗಳು ಮುಂದಾಗಿದ್ದಾರೆ.



ಮೀಸಲು ಅರಣ್ಯದಲ್ಲಿ ಜಾಗ ನೀಡಲು ಸರ್ಕಾರ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಆದಿವಾಸಿಗಳು ರಾತ್ರೋರಾತ್ರಿ ಅದೇ ಸ್ಥಳದಲ್ಲಿ ಗುಡಿಸಲುಗಳನ್ನು ನಿರ್ಮಾಣ ಮಾಡಿ ವಾಸ್ತವ್ಯ ಹೂಡುವ ಮೂಲಕ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯಾಧಿಕಾರಿಗಳು ಆದಿವಾಸಿಗಳನ್ನು ಮತ್ತೆ ಒಕ್ಕಲೆಬ್ಬಿಸುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin