ಮರಳುದಿಬ್ಬ ಕುಸಿದು ವ್ಯಕ್ತಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

madhukiri

ಮಧುಗಿರಿ, ಮೇ 3- ಕಾಲುವೆಯಲ್ಲಿ ಮರಳು ತುಂಬುತ್ತಿದ್ದಾಗ ದಿಬ್ಬ ಕುಸಿದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.  ತಾಲೂಕಿನ ದೊಡ್ಡೇರಿ ಹೋಬಳಿಯ ನಾಗೇನಹಳ್ಳಿ ಕೆರೆ ಕಾಲುವೆಯಲ್ಲಿ ಮರಳು ದಿಬ್ಬ ಕುಸಿದು ಬಡವನಹಳ್ಳಿ ವಾಸಿ ಸೋಮಶೇಖರ್ (32) ಮೃತಪಟ್ಟ ದುರ್ದೈವಿ.ಈತ ಆಪನಹಳ್ಳಿಯ ಮುದ್ದರಾಜು ಎಂಬುವವರ ಟ್ರಾಕ್ಟರ್‍ಗೆ ಮರಳು ತುಂಬುವಾಗ ಮೇಲಿದ್ದ ಮರಳುದಿಬ್ಬ ಹಠಾತ್ತನೆ ಕುಸಿದ ಪರಿಣಾಮ ಕೆಳಗೆ ಮರಳು ತುಂಬುತ್ತಿದ್ದ ಸೋಮಶೇಖರ್ ಮರಳಿನಲ್ಲೇ ಹೂತುಹೋಗಿದ್ದು, ಉಸಿರುಗಟ್ಟಿ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ.

ಮೃತನಿಗೆ ಮಡದಿ ಹಾಗೂ ಎರಡು ಹೆಣ್ಣುಮಕ್ಕಳಿದ್ದು, ಪತ್ನಿ ನಿರ್ಮಲ ನೀಡಿದ ದೂರಿನ ಮೇಲೆ ಬಡವನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಹೋಬಳಿಯಲ್ಲಿ ಹಲವು ಕಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಅಮಾಯಕ ಜೀವ ಬಲಿಯಾಗುತ್ತಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆಯೇ ಕಾದುನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin