ಮಲ್ಟಿಫ್ಲೆಕ್ಸ್’ಗಳಲ್ಲಿ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Multiflex

ಬೆಂಗಳೂರು, ಮೇ 3- ರಾಜ್ಯ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಮಲ್ಟಿಫ್ಲೆಕ್ಸ್‍ಗಳು ಸಿನಿ ಪ್ರೇಕ್ಷಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿರುವುದು ಪ್ರೇಕ್ಷಕರನ್ನು  ಕೆರಳಿಸಿದೆ.ಈ ಬಗ್ಗೆ ಪ್ರಶ್ನಿಸಿದರೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ತಮ್ಮ ಕೈ ಸೇರಿಲ್ಲ. ಹಾಗಾಗಿ ಹಳೆಯ ದರದಲ್ಲೇ ಟಿಕೆಟ್ ನೀಡಲಾಗುತ್ತಿದೆ ಎಂದು ಮಲ್ಟಿಫ್ಲೆಕ್ಸ್‍ನವರು ಸಬೂಬು ಹೇಳುವ ಮೂಲಕ ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ .



ನಗರದ ವಿವಿಧೆಡೆ ಇರುವ ಐನಾಕ್ಸ್ ಮಲ್ಟಿಫ್ಲೆಕ್ಸ್, ಪಿವಿಆರ್ ಚಿತ್ರಮಂದಿಗಳಲ್ಲಿ ಕನ್ನಡ ಮತ್ತು ಪರಭಾಷಾ ಚಿತ್ರಗಳ ಟಿಕೆಟ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.ಮಲ್ಟಿಫ್ಲೆಕ್ಸ್‍ಗಳು ಸರ್ಕಾರ ಮತ್ತು ಕನ್ನಡ ವಿರೋಧಿ ಧೋರಣೆಯನ್ನು ಅನುಸರಿಸುವ ಮೂಲಕ ಪ್ರೇಕ್ಷಕರ ಕಿಸೆಯನ್ನು ಲೂಟಿ ಮಾಡುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin