ವಿಷದ ಮಾತ್ರೆ ಮತ್ತು ಇಂಜೆಕ್ಷನ್ ನೀಡಿ ಪತಿಯನ್ನೇ ಕೊಂದ ಪತ್ನಿ..!

ಈ ಸುದ್ದಿಯನ್ನು ಶೇರ್ ಮಾಡಿ

Hassan-Husband-Murder

ಹಾಸನ, ಮೇ 3- ಪತ್ನಿಯೇ ತನ್ನ ಪತಿಗೆ ವಿಷಕಾರಕ ಮಾತ್ರೆ ಹಾಗೂ ಇಂಜೆಕ್ಷನ್ ನೀಡಿ ಕೊಲೆಗೈದಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಿತ್ತನಗೆರೆ ಗ್ರಾಮದಲ್ಲಿ ನಡೆದಿದೆ. ವಿಶ್ವನಾಥ್ (28) ಸಾವನ್ನಪ್ಪಿದ ಪತಿ. ಆಶಾ ಪತಿಯನ್ನೇ ಕೊಲೆಗೈದ ಪತ್ನಿ. ವಿಶ್ವನಾಥ್ ಹಾಗೂ ಆಶಾ ಕಳೆದ ಎರಡು ತಿಂಗಳ ಹಿಂದಷ್ಟೆ ವಿವಾಹವಾಗಿದ್ದರು. ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇತ್ತು ಎಂದು ಹೇಳಲಾಗುತ್ತಿದೆ.   ಪತ್ನಿ ಆಶಾ ತನ್ನ ಪತಿಗೆ ವಿಷಪೂರಿತ ಮಾತ್ರೆ ಹಾಗೂ ಇಂಜೆಕ್ಷನ್ ನೀಡುತ್ತಿದ್ದಳು ಎನ್ನಲಾಗಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಪತಿ ವಿಶ್ವನಾಥ್‍ನನ್ನು ಪಾರ್ಕ್‍ನಲ್ಲಿ ಬಿಟ್ಟು ಹೋಗಿದ್ದಾಳೆ. ಸಾವು-ಬದುಕಿನ ನಡುವೆ ಹೋರಾಟ ನಡೆಸಿ ವಿಶ್ವನಾಥ್ ಸಾವನ್ನಪ್ಪಿದ್ದಾರೆ. ಪಾರ್ಕ್‍ನಲ್ಲಿ ಶವ ಕಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.



ಈ ಸಂಬಂಧ ದುದ್ದ ಮತ್ತು ಹಾಸನ ನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಮೃತನ ಪತ್ನಿ ಆಶಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಆಶಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು ಎಂದು ಗ್ರಾಮಸ್ಥರು ದೂರಿದ್ದು, ನನ್ನ ಮಗನ ಸಾವಿಗೆ ಸೊಸೆಯೇ ಕಾರಣ ಎಂದು ಮೃತನ ಪೋಷಕರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin