ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಉಪ್ಪಾರ ಜನಾಂಗ ಮುಂದೆ ಬರಲಿ

ಈ ಸುದ್ದಿಯನ್ನು ಶೇರ್ ಮಾಡಿ

nanjanagudu

ನಂಜನಗೂಡು, ಮೇ 3- ಉಪ್ಪಾರ ಜನಾಂಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದು, ಈ ಜನಾಂಗವು ಸಮಾಜದಲ್ಲಿ ಮುಂದೆ ಬರಬೇಕೆಂದು ಶಾಸಕ ಕಳಲೆ ಕೇಶವಮೂರ್ತಿ ಕರೆ ನೀಡಿದರು.ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸರಳವಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಶ್ರೀ ಭಗೀರಥ ಜಯಂತಿ ಪ್ರಯುಕ್ತ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಅವರು ಮಾತನಾಡಿದರು.ತಾ.ಪಂ.ಸದಸ್ಯ ಶಿವಣ್ಣ ಮಾತನಾಡಿ, ಉಪ್ಪಾರ ಜನಾಂಗದ ಸ್ವಾತಂತ್ರ್ಯ ಪೂರ್ವದಿಂದಲೂ, ಮಹಾತ್ಮ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಕಾಲದಿಂದಲೂ ಸರ್ಕಾರದ ಯಾವುದೇ ಸೌಲಭ್ಯಗಳು ದೊರಕದೆ ವಂಚಿತರಾಗಿದ್ದು ಶಿಕ್ಷಣ, ಸಾಮಾಜಿಕ, ಆರ್ಥಿಕವಾಗಿ, ರಾಜಕೀಯವಾಗಿ ಸಾಮಾಜಿಕವಾಗಿ ಮುಂದುವರಿಯಬೇಕಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಎಂ.ದಯಾನಂದ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರೇವಣ್ಣ, ವರುಣಾ ಕ್ಷೇತ್ರದ ಬಗರ ಹುಕ್ಕುಂ ಅಕ್ರಮ-ಸಕ್ರಮ ಅಧ್ಯಕ್ಷ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಧ್ಯಕ್ಷ ಶಿವಣ್ಣ, ಮಾಜಿ ಜಿ.ಪಂ.ಸದಸ್ಯ ಕೆ.ಮಾರುತಿ, ಜಾಮಿಯಾ ಮಸೀದಿ ಅಧ್ಯಕ್ಷ ಖಾದರ್‍ಸಾಬ್, ಅರ್.ಐ.ಶ್ರೀನಿವಾಸ್, ಸುಬ್ಬಣ್ಣ, ದೇವಿರಮ್ಮನಹಳ್ಳಿ ಬಸವರಾಜು, ಮಹದೇವು, ಮಹದೇವಪ್ಪ, ಸಿ.ಡಿ.ಪಿ.ಒ.ಗೀತಾಲಕ್ಷ್ಮಿ, ಕಲಾವತಿ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin