ಉತ್ತರ ಇರಾನ್‍ನ ಕಲ್ಲಿದ್ದಲು ಗಣಿಯೊಂದರಲ್ಲಿ ಭಾರೀ ಸ್ಪೋಟ : ಹಲವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Mining--01

ಟೆಹ್ರಾನ್, ಮೇ 4- ಉತ್ತರ ಇರಾನ್‍ನ ಕಲ್ಲಿದ್ದಲು ಗಣಿಯೊಂದರಲ್ಲಿ ಭಾರೀ ಸ್ಪೋಟವೊಂದು ಸಂಭವಿಸಿದ ನಂತರ 50ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದು, ಅವರಲ್ಲಿ ಅನೇಕರು ಮೃತಪಟ್ಟಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿದೆ.  ಗೋಲೆಸ್ತಾನ್ ರಾಜ್ಯದ ಜಮಸ್ತಾನ್‍ಯುರ್ಟ್ ಕಲ್ಲಿದ್ದಲು ಗಣಿಯಲ್ಲಿ ಬುಧವಾರ ಭಾರೀ ಸ್ಫೋಟ ಸಂಭವಿಸಿತು. ಈ ದುರಂತದಿಂದ ಕೆಲವರನ್ನು ರಕ್ಷಿಸಲಾಗಿದೆ ಗಣಿಯೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದ್ದು, ಅನೇಕ ಸಾವು-ನೋವು ಸಂಭವಿಸಿರುವ ಆತಂಕವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin