ಕೆಂಪಮ್ಮ ದೇವಿ ಕುಂಭಾಭಿಷೇಕ

ಈ ಸುದ್ದಿಯನ್ನು ಶೇರ್ ಮಾಡಿ

huliyar-3

ಹುಳಿಯಾರು, ಮೇ 4- ಹೋಬಳಿಯ ಯರೇಹಳ್ಳಿ ಗ್ರಾಮದ ಕೆಂಪಮ್ಮ ದೇವಿಯ ನೂತನ ದೇಗುಲದ ಕಲಶ ಸ್ಥಾಪನೆ ಹಾಗೂ ಮಹಾ ಕುಂಭಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು ಇಂದಿನಿಂದ ಪ್ರಾರಂಭವಾಗಿವೆ. ಇಂದು ಮಹಾಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಶುದ್ಧಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.ನಾಳೆ ಬೆಳಿಗ್ಗೆ ಸುವರ್ಣ ಮುಖಿ ನದಿಯಲ್ಲಿ ಗಂಗಾಪೂಜೆ, ನಡೆಮುಡಿ ಉತ್ಸವ, ವಿವಿಧ ಹೋಮಹವನಾದಿಗಳು ನಡೆಯಲಿವೆ. 9 ಗಂಟೆಗೆ ನೂತನ ಗೋಪು ರದ ಕಳಶ ಸ್ಥಾಪನೆ, ಮಧ್ಯಾಹ್ನ 12 ಗಂಟೆಗೆ ಕುಂಭಾಭಿಷೇಕ ನಡೆಯಲಿದೆ.

6ರಂದು ಅರಸೀಕೆರೆ ಮಾರುತಿ ಸಚ್ಚಿದಾನಂದಾಶ್ರಮದ ಸತೀಶ್ ಶರ್ಮ ಮಹಾರಾಜ್ ಅವರ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಮಾಜಿಪ್ರಧಾನಿ ಎಚ್.ಡಿ.ದೇವೇಗೌಡ, ಸಚಿವ ಟಿ.ಬಿ.ಜಯಚಂದ್ರ, ಶಾಸಕ ಸುರೇಶ್ ಬಾಬು ಹಾಜರಿರುವರು. ನೂತನ ದೇಗುಲ ಉದ್ಘಾಟನೆ ವೇಳೆ ಗಾಣಧಾಳು ರಂಗನಾಥಸ್ವಾಮಿ, ಕಂಚೀಪುರ ವರದರಾಜಸ್ವಾಮಿ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಗ್ರಾಮದೇವತೆಗಳು ಬರುವುದು ವಿಶೇಷವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin