ಪರಮಾಣು ಸಿಡಿತಲೆ ಹೊತ್ತೊಯ್ಯಬಲ್ಲ ಕ್ಷಿಪಣಿಯ ಯಶಸ್ವೀ ಪರೀಕ್ಷೆ ನಡೆಸಿದ ಅಮೆರಿಕಾ

ಈ ಸುದ್ದಿಯನ್ನು ಶೇರ್ ಮಾಡಿ

America--01

ವಾಷಿಂಗ್ಟನ್, ಮೇ 4-ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವಂತೆ ಪರಮಾಣು ಬಾಂಬ್ ಹೊತ್ತೊಯ್ಯಬಲ್ಲ ದೀರ್ಘ ವ್ಯಾಪ್ತಿಯ ಪ್ರಬಲ ಕ್ಷಿಪಣಿಯೊಂದನ್ನು ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಗಿದೆ. ಇದು ಉತ್ತರ ಕೊರಿಯಾಗೆ ಪರೋಕ್ಷವಾಗಿ ನೀಡಿರುವ ಎಚ್ಚರಿಕೆ ಸಂದೇಶವಾಗಿದ್ದು, ಈ ಪ್ರಯೋಗದಿಂದ ಪಯೊಂಗ್‍ಯಾಂಗ್ ತಲ್ಲಣಗೊಂಡಿದೆ.



ಶಸ್ತ್ರರಹಿತವಾಗಿ(ಅಣುಬಾಂಬ್ ಇಲ್ಲದೇ) ಈ ಪ್ರಯೋಗ ನಡೆಸಲಾಗಿದೆ. ಮಿನಿಟ್‍ಮನ್-3 ಹೆಸರಿನ ಈ ಖಡಾಂತರ ಕ್ಷಿಪಣಿಯನ್ನು ಪ್ಯಾಂಡನ್‍ಬರ್ಗ್ ವಾಯು ನೆಲೆಯಿಂದ ಸ್ಥಳೀಯ ಕಾಲಮಾನ ಮಧ್ಯರಾತ್ರಿ 12.02 ಗಂಟೆಗೆ ಹಾರಿಸಲಾಯಿತು. ಇದು 6,760 ಕಿ.ಮೀ. ದೂರದಲ್ಲಿನ ಪೆಸಿಫಿಕ್ ಸಮುದ್ರದಲ್ಲಿರುವ ಕ್ವಜಾಲೇನ್ ದ್ವೀಪದ ಮೇಲೆ ಅಪ್ಪಳಿಸಿತು ಎಂದು ಏರ್‍ಫೋರ್ಸ್ ಗ್ಲೋಬಲ್ ಸ್ಟ್ರೈಕ್ ಕಮಾಂಡ್ ತಿಳಿಸಿದೆ.

ಅಮೆರಿಕದ ಪರಮಾಣು ವಿಭಾಗದ ಶಸ್ತ್ರಾಸ್ರಗಳ ಸಿದ್ಧತೆ ಮತ್ತು ನಿಖರತೆ ಪರಿಶೀಲಿಸುವುದಕ್ಕಾಗಿ ಈ ಪರೀಕ್ಷೆ ನಡೆಸಲಾಗಿದೆ ಎಂದು ಕಮಾಂಡ್ ಹೇಳಿದೆ. ಅಮೆರಿಕದಲ್ಲಿ ಇಂಥ 450 ಕ್ಷಿಪಣಿಗಳಿವೆ. ಪ್ರತಿಯೊಂದೂ ಕ್ಷಿಪಣಿಯೂ ಈಗ ನಡೆಸಲಾದ ಪ್ರಯೋಗಕ್ಕಿಂತ ಎರಡರಷ್ಟು (12,875 ಕಿ.ಮೀ.) ಕಿ.ಮೀ. ದೂರ ಹಾರಿ ನಿಖರ ಗುರಿಯನ್ನು ಧ್ವಂಸಗೊಳಿಸುವ ಸಾಮಥ್ರ್ಯ ಹೊಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin