ರೈಲು ಹತ್ತಲು ಹೋಗಿ ಸಾವನ್ನಪ್ಪಿದ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

rail

ಕೊಪ್ಪಳ, ಮೇ 4- ರೈಲು ಹತ್ತಲು ಹೋಗಿದ್ದ ಮಹಿಳೆ ಆಯತಪ್ಪಿ ಬಿದ್ದು ಎರಡು ಕಾಲು ಕಳೆದುಕೊಂಡು ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿರುವ ಘಟನೆ ಯಲಬುರ್ಗ ತಾಲೂಕಿನ ಬಾನಾಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.ಯಲಬುರ್ಗ ತಾಲೂಕಿನ ಸೋಂಪುರ ಗ್ರಾಮದ ನಿವಾಸಿ ಕಲ್ಲಮ್ಮ (55) ಸಾವನ್ನಪ್ಪಿದ ಮಹಿಳೆಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಹೊರಟಿದ್ದ ಮಹಿಳೆ ರೈಲು ಹತ್ತಲು ಹೋಗಿದ್ದ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಕಾಲು ಕಳೆದುಕೊಂಡಿದ್ದಾರೆ.
ಎರಡೂ ಕಾಲುಗಳನ್ನು ಕಳೆದುಕೊಂಡ ಮಹಿಳೆಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗದಗ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin