ಸ್ವಚ್ಛ ನಗರಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದ ಮೈಸೂರು, ಇಂದೋರ್ ನಂ.1

ಈ ಸುದ್ದಿಯನ್ನು ಶೇರ್ ಮಾಡಿ

Mysuru--01

ನವದೆಹಲಿ, ಮೇ.4-ಮಧ್ಯಪ್ರದೇಶದ ಇಂದೋರ್ ಭಾರತದ ಅತ್ಯಂತ ಸ್ವಚ್ಛನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ರಾಜ್ಯದ ಭೋಪಾಲ್ ದೇಶದ 2ನೇ ಅತಿ ಸ್ವಚ್ಛ ನಗರ ಎಂಬ ಖ್ಯಾತಿ ಗಳಿಸಿದೆ.   ಆಂಧ್ರಪ್ರದೇಶದ ಬಂದರುನಗರಿ ವಿಶಾಖಪಟ್ಟಣಂ ಮೂರನೇ ಸ್ಥಾನ ಗಳಿಸಿದೆ. ನಾಲ್ಕನೇ ಸ್ಥಾನ ಗುಜರಾತ್‍ನ ಸೂರತ್ ನಗರದ ಪಾಲಾಗಿದೆ.  ಆದರೆ ಕರ್ನಾಟಕದ ಸಾಂಸ್ಕøತಿಕ ನಗರಿ ಎಂದೇ ಕೀರ್ತಿಗೆ ಪಾತ್ರವಾಗಿ ಎರಡು ಬಾರಿ ಭಾರತದ ಅತಿ ಸ್ವಚ್ಛನಗರ ಎಂಬ ಹಿರಿಮೆಗೆ ಪಾತ್ರವಾಗಿದ್ದ ಮೈಸೂರು ಐದನೇ ರ್ಯಾಂಕಿಂಗ್‍ನಲ್ಲಿದ್ದು ಕನಸು ಭಗ್ನಗೊಂಡಿದೆ.  ಕೇಂದ್ರ ನಗರಾಭಿವೃದ್ದಿ ಸಚಿವ ಎಂ.ವೆಂಕಯ್ಯ ನಾಯ್ಡು ಇಂದು ದೆಹಲಿಯಲ್ಲಿ ಸ್ವಚ್ಛ ಸರ್ವೇಕ್ಷಣಾ 2017ರ ಭಾಗವಾಗಿ ದೇಶದ 25 ಸ್ವಚ್ಛನಗರಗಳ ಹೆಸರುಗಳನ್ನು ಪ್ರಕಟಿಸಿದರು.ದೇಶದ 434 ನಗರಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ನಡೆಸಲಾದ ಸಮೀಕ್ಷೆಗಾಗಿ 73 ನಗರಗಳಿಂದ 37 ಲಕ್ಷ ಮತಗಳು ಚಲಾವಣೆಗೊಂಡಿದ್ದವು.   ಮಧ್ಯಪ್ರದೇಶ, ಗುಜರಾತ್, ಜಾರ್ಜಖಂಡ್ ಮತ್ತು ಛತ್ತೀಸ್‍ಘಡ ರಾಜ್ಯಗಳು ಸ್ವಚ್ಛತಾ ಅಭಿಯಾನದಲ್ಲಿ ಗಮನಾರ್ಹ ಸುಧಾರಣೆ ಸಾಧಿಸಿವೆ ಎಂದು ವೆಂಕಯ್ಯ ನಾಯ್ಡು ಹೇಳಿದರು.   ತಮಿಳುನಾಡಿನ ತಿರುಚಿರಾಪಳ್ಳಿ, ನವದೆಹಲಿ, ಮಹಾರಾಷ್ಟ್ರದ ನವಿ ಮುಂಬೈ, ಆಂಧ್ರಪ್ರದೇಶದ ತಿರುಪತಿ ಹಾಗೂ ಗುಜರಾತ್‍ನ ವಡೋದರ ಅನುಕ್ರಮವಾಗಿ 6, 7, 8, 9 ಮತ್ತು 10ನೇ ಸ್ಥಾನ ಪಡೆದಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin