12 ಯೋಧರ ಹತ್ಯೆಗೆ ನಕ್ಸಲರ ವಿಫಲ ಯತ್ನ, ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Naxal

ಗಡ್‍ಚಿರೋಲಿ, ಮೇ 4-ಛತ್ತೀಸ್‍ಗಢ್‍ನ ಸುಕ್ಮಾ ಜಿಲ್ಲೆಯಲ್ಲಿ ನಕ್ಲಲರು ನಡೆಸಿದ 25 ಸಿಆರ್‍ಪಿಎಫ್ ಯೋಧರ ಮಾರಣಹೋಮ ನೆನಪಿನಲ್ಲಿರುವಾಗಲೇ, ಮಹಾರಾಷ್ಟ್ರದ ಗಡ್‍ಚಿರೋಲಿ ಜಿಲ್ಲೆಯಲ್ಲಿ ನೆಲಬಾಂಬ್ ಮೂಲಕ 12 ಸೈನಿಕರನ್ನು ಕೊಲ್ಲಲು ಮಾವೋವಾದಿ ಬಂಡುಕೋರರು ಯತ್ನಿಸಿದ್ದಾರೆ.   ನಕ್ಸಲರು ಹುದುಗಿಸಿರಿಸಿದ್ದ ನೆಲಬಾಂಬ್ ಜಿಲ್ಲೆಯ ಭಮ್ರಾಗಢ್‍ನಲ್ಲಿ ಬುಧವಾರ ರಾತ್ರಿ ಗಣಿ ರಕ್ಷಣೆಗೆ ನಿಯೋಜನೆಗೊಂಡಿದ್ದ ಸಿ-60 ಕಮಾಂಡ್‍ನ ಬೆಂಗಾವಲು ವಾಹನ ಹಾದು ಹೋದಾಗ ಸ್ಫೋಟಗೊಂಡಿತು. ಈ ಘಟನೆಯಲ್ಲಿ 12 ಯೋಧರು ಗಾಯಗೊಂಡಿದ್ದಾರೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.



ನಕ್ಸಲ ವಿರುದ್ಧ ಕಾರ್ಯಾಚರಣೆ ನಡೆಸಲು ಸಹ ಈ ದಳವನ್ನು ನಿಯೋಜಿಸಲಾಗಿತ್ತು. ಘಟನೆ ನಡೆದ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆ ಪ್ರದೇಶದಲ್ಲಿ ಮಾವೋವಾದಿ ಬಂಡುಕೋರರಿಗಾಗಿ ವ್ಯಾಪಕ ಬಲೆ ಬೀಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin