ಆಟೋ,ಬಸ್ ಮುಖಾಮುಖಿ ಡಿಕಿ : ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident

ಸೂಲಿಬೆಲೆ, ಮೇ 5- ಹೊಸಕೋಟೆ-ಚಿಂತಾಮಣೆ ಮಾರ್ಗದ ತರಬಹಳ್ಳಿ ಗೇಟ್ ಬಳಿ ರಾತ್ರಿ ಆಟೋ ಮತ್ತು ಆಂಧ್ರ ಸಾರಿಗೆ ಬಸ್ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ನಂದುಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಂಪಂಗಿ(45), ಮನೋಜ್ (35)ಮೃತಪಟ್ಟ ದುರ್ದೈವಿಗಳು.ಹೊಸಕೋಟೆ ತಾಲೂಕು ಗಡಿ ಭಾಗದಲ್ಲಿರುವ ಶಿಡ್ಲಘಟ್ಟ ತಾಲ್ಲೂಕಿನ ಹೆಚ್.ಕ್ರಾಸ್ ಕಡೆಯಿಂದ ಆಟೋದಲ್ಲಿ ರಾಸುಗಳಿಗೆ ಹಾಕುವ ಬೂಸಾ ತುಂಬಿಕೊಂಡು ಸಂಪಂಗಿ, ಮನೋಜ್ ಬರುತ್ತಿದ್ದರು. ತರಬಹಳ್ಳಿ ಗೇಟ್ ಬಳಿ ಬೆಂಗಳೂರು ಕಡೆಯಿಂದ ಮದನಪಲ್ಲಿ ಕಡೆ ಹೋಗುತ್ತಿದ್ದ ಆಂಧ್ರ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮುಖಾಮುಖಿಯಾಗಿದೆ.  ಡಿಕ್ಕಿ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದ್ದು, ಇದರಲ್ಲಿ ಪ್ರಯಾಣಿಸುತ್ತಿದ್ದ ಮನೋಜ್ ಸ್ಥಳದಲ್ಲಿಯೇ ಸಾವನ್ನಪ್ಪಿದರೇ, ಗಂಭೀರವಾಗಿ ಗಾಯಗೊಂಡ ಸಂಪಂಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin