ತಮಿಳುನಾಡಿನ ಮರಳು ಗಣಿದಣಿ ರೆಡ್ಡಿಯ 34 ಕೋಟಿ ರೂ. ಮುಟ್ಟುಗೋಲು

ಈ ಸುದ್ದಿಯನ್ನು ಶೇರ್ ಮಾಡಿ

Shekhar-Reddy--01

ಚೆನ್ನೈ,ಮೇ 5-ತಮಿಳುನಾಡಿನ ಮರಳು ಗಣಿ ದಣಿ ಜೆ.ಶೇಖರ ರೆಡ್ಡಿ ಹಾಗೂ ಆತನ ಸಹಚರರಿಂದ ಅಕ್ರಮ ಹಣ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾದ 34 ಕೋಟಿ ರೂ.ಗಳ ಆಸ್ತಿಪಾಸ್ತಿಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಮುಟುಗೋಲು ಹಾಕಿದೆ.   ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅಧಿಕ ಮುಖಬೆಲೆಯ ನೋಟುಗಳನ್ನು ಅಮಾನೀಕರಣ ಮಾಡಿತ್ತು. ಇದಾದ ನಂತರ ದೇಶದ ಹಲವು ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.   ಈ ವೇಳೆ ಜೆ.ಶೇಖರರೆಡ್ಡಿ ಮೇಲೆ ಐಟಿ ದಾಳಿ ನಡೆಸಿದಾಗ ಅವರ ಬಳಿ ದಾಖಲೆಯಿಲ್ಲದ 142 ಕೋಟಿ ಹಣ ಮತ್ತು ಹೊಸ ನೋಟುಗಳುಳ್ಳ 34 ಕೋಟಿ ಹಣ ಪತ್ತೆಯಾಗಿತ್ತು.



ಇದರ ಹಿಂದೆ ಜೆ.ಶೇಖರ್ ರೆಡ್ಡಿ ಹಾಗೂ ಆತನ ಸಹಚರರು ಕಪ್ಪು ಹಣ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದರು ಎಂಬ ಆರೋಪದಡಿ ಅವರ ವಿರುದ್ಧ ಸಿಬಿಐನ ಎಫ್‍ಐಆರ್ ದೂರಿನನ್ವಯ ಜಾರಿ ನಿರ್ದೇಶನಾಲಯವು ಕ್ರಿಮಿನಲ್ ದೂರು ದಾಖಲು ಮಾಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin