ದುಬೈ, ಇಸ್ರೇಲ್ ದೇಶಗಳಂತೆ ನಮ್ಮ ರಾಜ್ಯದಲ್ಲೂ ನೀರಿನ ನಿರ್ವಹಣೆ ಮಾಡಬೇಕು : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha

ಬೆಂಗಳೂರು, ಮೇ 5-ಮರಳುಗಾಡಿನಂತಿರುವ ದುಬೈ, ಇಸ್ರೇಲ್ ದೇಶಗಳಂತೆ ನಮ್ಮ ರಾಜ್ಯದಲ್ಲೂ ನೀರಿನ ನಿರ್ವಹಣೆ ಉತ್ತಮವಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಲಹೆ ಮಾಡಿದರು. ನೀರಾವರಿ ತಜ್ಞ ಎಸ್.ಜಿ.ಬಾಳೇಕುಂದ್ರಿ ಅವರ 2016ನೇ ಸಾಲಿನ ಪ್ರಶಸ್ತಿಯನ್ನು ಐದು ಮಂದಿ ಎಂಜಿನಿಯರ್‍ಗಳಿಗೆ ಪ್ರದಾನ ಮಾಡಿ ಮಾತನಾಡಿದ ಅವರು, ನಮ್ಮಲ್ಲಿ ನೀರಿನ ನಿರ್ವಹಣೆ ಸಮರ್ಪಕವಾಗಿಲ್ಲ. ಆದರೆ, ದುಬೈ, ಇಸ್ರೇಲ್‍ಗಳಲ್ಲಿ ಮರುಭೂಮಿಯಲ್ಲೂ ಹಸಿರು ಕಾಣುವಂತೆ ಮಾಡಿದ್ದಾರೆ. ಸರಿಯಾದ ನೀರಿನ ನಿರ್ವಹಣೆ ಮಾಡಿದರು ಇನ್ನು ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.

ಮಿತವಾಗಿ ನೀರು ಬಳಸುವುದರಿಂದ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ವಿಸ್ತರಣೆಯಾಗುವುದರ ಜತೆಗೆ ಆಹಾರಧಾನ್ಯದ ಉತ್ಪಾದನೆಯೂ ಹೆಚ್ಚಲಿದೆ. ಬತ್ತ ಬೆಳೆಯಲು ಕಡಿಮೆ ನೀರಿನ ಹಲವು ವೈಜ್ಞಾನಿಕ ವಿಧಾನಗಳು ಇದ್ದರೂ ಈಗಲೂ ನೀರು ನಿಲ್ಲಿಸಿ ಬತ್ತ ಬೆಳೆಯುವ ಪದ್ಧತಿ ರೂಡಿಯಲ್ಲಿದೆ. ನೀರಿನ ನಿರ್ವಹಣೆ ವೈಜ್ಞಾನಿಕ ರೀತಿಯಲ್ಲಿ ಆಗಬೇಕು. ಕೇವಲ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪದ್ಧತಿ ಅಳವಡಿಸಿದರೆ ಸಾಲದು ಎಂದು ಹೇಳಿದರು.ಎಂಜಿನಿಯರ್‍ಗಳು ನಿರಂತರ ಅಧ್ಯಯನ ಹಾಗೂ ಚಿಂತನಾ ಶೀಲರಾಗಬೇಕು. ಹೊಸ ಆವಿಷ್ಕಾರಗಳ ಅನ್ವೇಷನಣೆ ಮಾಡಬೇಕು. ತಮ್ಮ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ನೀರಾವರಿಗೆ 60 ಸಾವಿರ ಕೋಟಿ ರೂ ಖರ್ಚು ಮಾಡುತ್ತಿದ್ದೇವೆ. ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 50 ಸಾವಿರ ಕೋಟಿ ರೂ ಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಕೃಷ್ಣಾ ಕೊಳ್ಳದ ಯೋಜನೆಗೆ 50 ಸಾವಿರ ಕೋಟಿ ರೂ ಬೇಕು. ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಒಂದು ಲಕ್ಷ ಕೋಟಿ ರೂ ಕೂಡ ಸಾಲುವುದಿಲ್ಲ.

ನಿಗದಿತ ಅವಧಿಯೊಳಗೆ ಯೋಜನೆಗಳು ಪೂರ್ಣಗೊಳ್ಳಬೇಕು. ಆದರೆ, ಬಹುತೇಕ ಯೋಜನೆಗಳು ವಿಳಂಬವಾಗಿ ವೆಚ್ಚ ಹೆಚ್ಚಾಗುತ್ತದೆ. ಬಾಳೇ ಕುಂದ್ರಿ ಅವರು ನೀರಾವರಿ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಸ್ಮರಿಸಲು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಬೇಕು. 2017ರ ಪ್ರಶಸ್ತಿಯನ್ನು ಇದೇ ವರ್ಷವೇ ನೀಡಬೇಕು ಎಂದರು.
ಸರ್ಕಾರ ನೀಡುವ ಯಾವುದೇ ಪ್ರಶಸ್ತಿಗೆ ಶಿಫಾರಸ್ಸು ಮಾಡಲ್ಲ, ಮೂಗು ತೂರಿಸಲ್ಲ, ತಲೆ ಹಾಕುವುದಿಲ್ಲ. ಪ್ರಶಸ್ತಿ ಪುರಸ್ಕøತರ ಆಯ್ಕೆಗೆ ಸಮಿತಿ ರಚಿಸಲಿದ್ದು, ಆ ಸಮಿತಿ ಮಾಡುವ ಆಯ್ಕೆಯನ್ನು ಒಪ್ಪಿಗಕೊಳ್ಳಲಿದೆ ಎಂದರು.

ಆಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಕಳೆದ ನಾಲ್ಕು ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆಗೆ 45 ಸಾವಿರ ಕೋಟಿ ರೂ ಒದಗಿಸಲಾಗಿದೆ. ಈ ವರ್ಷವೂ ನೀರಾವರಿಗೆ 16 ಸಾವಿರ ಕೋಟಿ ಹಣ ನೀಡಲಾಗಿದೆ. ನೀರಿನ ಮಿತ ಬಳಕೆ ಮಾಡಲು ಏಷ್ಯಾದಲೇ ಮೊದಲ ಬಾರಿ ಹುನಗುಂದ ತಾಲೂಕಿನ ರಾಮತಾಳದಲ್ಲಿ ಹನಿ ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ. ಇದು ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾಗಿ ಮುಕ್ತಾಯವಾಗಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin