ಬೆಳ್ಳಂದೂರು ಕೆರೆಯ ಸುತ್ತಲಿನ ಮತ್ತಷ್ಟು ಕಂಪೆನಿಗಳಿಗೆ ಲಾಕ್‍ಔಟ್ ಆದೇಶ..?

ಈ ಸುದ್ದಿಯನ್ನು ಶೇರ್ ಮಾಡಿ

Bellandur-lake

ಬೆಂಗಳೂರು, ಮೇ 5- ಬೆಳ್ಳಂದೂರು ಕೆರೆ ಶುದ್ಧೀಕರಣ ಸಂಬಂಧ ಎನ್‍ಜಿಟಿ ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿಂದು ಮಹತ್ವದ ಸಭೆ ನಡೆಯಿತು. ಈಗಾಗಲೇ ಕೆರೆ ವ್ಯಾಪ್ತಿಯ ಒಟ್ಟು 448 ಕಂಪೆನಿಗಳಿಗೆ ಬೀಗ ಜಡಿಯಲು ನಿರ್ಧರಿಸಲಾಗಿದ್ದು, ಮತ್ತಷ್ಟು ಕಂಪೆನಿಗಳಿಗೆ ಲಾಕ್‍ಔಟ್ ಆದೇಶ ನೀಡುವ ಸಾಧ್ಯತೆ ಇದೆ.  ಸಭೆಯಲ್ಲಿ ಕೆರೆಗೆ ತ್ಯಾಜ್ಯ ಬಿಡುವ ಕಂಪೆನಿಗಳ ಪಟ್ಟಿ ಬಿಡುಗಡೆ ಮಾಡಲಾಯಿತು. ಬೆಳ್ಳಂದೂರು ಕೆರೆಗೆ ಮಾಲಿನ್ಯಕಾರಕ ವಸ್ತುಗಳನ್ನು ಹರಿಬಿಡುತ್ತಿದ್ದ ಕಂಪೆನಿಗಳನ್ನು ಲಾಕ್‍ಔಟ್ ಮಾಡಲು ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಗಂಭೀರ ಚರ್ಚೆ ನಡೆಯಿತು. ಪ್ರತಿಯೊಂದು ಕಂಪೆನಿಗೆ ಪ್ರತ್ಯೇಕ ಲಾಕ್‍ಔಟ್ ಆದೇಶ ಕೊಡುವ ಬದಲು ಒಟ್ಟಿಗೇ ದಿನಪತ್ರಿಕೆ ಮೂಲಕ ಆದೇಶ ನೀಡಲು ಮಾಲಿನ್ಯ ನಿಯಂತ್ರಣ ಮಂಡಳಿ ಚಿಂತನೆ ನಡೆಸಿದೆ.ಇನ್ನೊಂದೆಡೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಳ್ಳಂದೂರು ಕೆರೆಯನ್ನು ಶುದ್ಧೀಕರಣ ಮಾಡುವ ಕಾರ್ಯವೂ ನಡೆಯುತ್ತಿದೆ. ಬೆಳ್ಳಂದೂರು ಕೆರೆ ತೀವ್ರವಾಗಿ ಮಲಿನಗೊಂಡು ರಾಸಾಯನಿಕ ಪದಾರ್ಥಗಳಿಂದ ನೊರೆ ಉಕ್ಕಿ ಬೆಂಕಿ ಬಿದ್ದು ಸುತ್ತಮುತ್ತಲ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು.  ಇಲ್ಲಿರುವ ಕೈಗಾರಿಕೆಗಳ ತ್ಯಾಜ್ಯ ನೀರು ಕೆರೆಗೆ ಹರಿದ ಪರಿಣಾಮ ಕಲುಷಿತಗೊಂಡು ನೀರಿಗೆ ರಾಸಾಯನಿಕ ಪದಾರ್ಥಗಳು ಸೇರಿ ನೀರು ಹೊತ್ತಿ ಉರಿಯುತ್ತಿದ್ದ ಪರಿಣಾಮ ಪರಿಸರ ಮಾಲಿನ್ಯ ಉಂಟಾಗಿದ್ದನ್ನು ವಿರೋಧಿಸಿ ಹಲವು ಸಂಘಟನೆಗಳು ಎನ್‍ಜಿಟಿ ಮೊರೆ ಹೋಗಿದ್ದವು.   ಸರ್ಕಾರ ಹಾಗೂ ಬಿಡಿಎಅನ್ನು ಎನ್‍ಜಿಟಿ ತೀವ್ರ ತರಾಟೆಗೆ ತೆಗೆದುಕೊಂಡು ಒಂದು ತಿಂಗಳೊಳಗೆ ಇದನ್ನು ಸರಿಪಡಿಸುವಂತೆ ಆದೇಶ ನೀಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin