ಮೇ8ರ ವರೆಗೆ ದೊಡ್ಡಕೇರಮ್ಮ ಜಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

kr-pete

ಕೆಆರ್ ಪೇಟೆ, ಮೇ 5- ಪಟ್ಟಣದ ರಕ್ಷಾ ದೇವತೆ ಶ್ರೀ ದೊಡ್ಡಕೇರಮ್ಮನವರ ಸಿಡಿಹಬ್ಬ ಮತ್ತು ಜಾತ್ರಾ  ಮಹೋತ್ಸವವು 8ವರೆಗೆ ನಡೆಯಲಿವೆ ಎಂದು ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷ ಕೆ.ಎನ್.ಕೃಷ್ಣೇಗೌಡ ತಿಳಿಸಿದ್ದಾರೆ.ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ಬಾಯಿಬೀಗ, ಕೊಂಡೋತ್ಸವ, ಸಿಡಿಮದ್ದು ಪ್ರದರ್ಶನ, ಹಸಿರು ಬಂಡಿ ಉತ್ಸವ, ನಾಳೆ ಕನ್ನಂಕಾಡಿ ಉತ್ಸವ, ದೇವರ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ದೊಡ್ಡಕೇರಮ್ಮನವರ ಬ್ರಹ್ಮ ರಥೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.7ರಂದು ಚಿಕ್ಕೋಸಹಳ್ಳಿ ಬಳಿ ಇರುವ ದೊಡ್ಡಕೇರಮ್ಮನವರ ಹೊರ ದೇವಾಲಯದ ಆವರಣದಲ್ಲಿ ಸಿಡಿಯಾಟ, ಜಾತ್ರೆ , ಹಣ್ಣು-ಕಾಯಿ ಪೂಜೆ ಕಾರ್ಯಕ್ರಮಗಳು, ಮೇ 8ರಂದು ಓಕಳಿ, ಸೋಮನ ಕುಣಿತ ವಿಶೇಷ ಪೂಜ ಕಾರ್ಯಕ್ರಮಗಳು ನಡೆಯುವುವು.

ಸಂಜೆ ಪಟ್ಟಣದ ಅಗ್ರಹಾರ ಬಡಾವಣೆಯ ರಂಗದ ಬೀದಿಯಲ್ಲಿ ಶನಿಮಹಾತ್ಮೆ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ಹಬ್ಬ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ಎಪಿಎಂಸಿ ಅಧ್ಯಕ್ಷರೂ ಆದ ಕೆ.ಎನ್.ಕೃಷ್ಣೇಗೌಡ ತಿಳಿಸಿದರು. ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್.ರಾಮೇಗೌಡ, ಕೆ.ಕೆ.ಕೃಷ್ಣ, ಕೆಎಸ್‍ಆರ್‍ಟಿಸಿ ಶಿವಣ್ಣ, ಹಣ್ಣಿನ ಅಂಗಡಿ ರಾಮಣ್ಣ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin