ವಾಡಿಕೆ ಪ್ರಮಾಣದಲ್ಲಿ ಬೀಳದ ಮುಂಗಾರು ಪೂರ್ವಮಳೆ

ಈ ಸುದ್ದಿಯನ್ನು ಶೇರ್ ಮಾಡಿ

Rain001

ಬೆಂಗಳೂರು, ಮೇ 5- ಸತತ ಬರಗಾಲದಿಂದ ಬಸವಳಿದಿರುವ ರಾಜ್ಯದಲ್ಲಿ ಮುಂಗಾರು ಪೂರ್ವಮಳೆ ಕೂಡ ವಾಡಿಕೆ ಪ್ರಮಾಣದಲ್ಲಿ ಬಿದ್ದಿಲ್ಲ. ಕಳೆದ ಜನವರಿಯಿಂದ ಇದುವರೆಗೆ ಶೇ.23ರಷ್ಟು ಕಡಿಮೆ ಮುಂಗಾರು ಪೂರ್ವ ಮಳೆಯಾಗಿದೆ. ದಕ್ಷಿಣ ಒಳನಾಡನ್ನು ಹೊರತುಪಡಿಸಿದರೆ ರಾಜ್ಯದ ಯಾವ ಭಾಗದಲ್ಲೂ ಕೂಡ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಕೂಡ ಬರದ ತೀವ್ರತೆ ತಗ್ಗಿಸಲು ಸಾಧ್ಯವಾಗುತ್ತಿಲ್ಲ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇದುವರೆಗೆ ಶೇ.23ರಷ್ಟು ಈ ವರ್ಷವೂ ಮಳೆ ಕೊರತೆ ಕಂಡು ಬಂದಿದೆ.ಆದರೆ, ದಕ್ಷಿಣ ಒಳನಾಡಿನಲ್ಲಿ ಜನವರಿಯಿಂದ ಇದುವರೆಗೂ ಶೇ.5ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೂ ಕೂಡ ಈ ಬಿರುಬೇಸಿಗೆಯಲ್ಲಿ ಏನೇನೂ ಸಾಲದಂತಾಗಿದೆ.
ಕರಾವಳಿಯಲ್ಲೂ ಕೂಡ ಶೇ.47ರಷ್ಟು ಹಾಗೂ ಉತ್ತರ ಒಳನಾಡಿನಲ್ಲಿ ಶೇ.50ರಷ್ಟು ಮಳೆ ಕೊರತೆ ಕಂಡು ಬಂದಿದೆ. ಆದರೆ, ಮಲೆನಾಡು ಭಾಗದಲ್ಲಿ ಮಾತ್ರ ವಾಡಿಕೆ ಪ್ರಮಾಣದಲ್ಲಿ ಮಾತ್ರ ಮಳೆಯಾಗಿದೆ. ನೈರುತ್ಯ ಮುಂಗಾರು ಪ್ರಾರಂಭವಾಗಲು ಇನ್ನು ಮೂರು ವಾರಗಳು ಮಾತ್ರ ಬಾಕಿ ಉಳಿದಿದ್ದು, ಅಲ್ಲಿಯವರೆಗೆ ಚದುರಿದಂತೆ ಅಲ್ಲಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಜಂಟಿ ಮಾಹಿತಿ:

ರಾಜ್ಯದ ಹವಾಮಾನ ಮತ್ತು ಮಳೆ ಪರಿಸ್ಥಿತಿಯ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಜಂಟಿಯಾಗಿ ರೈತರಿಗೆ ಮಾಹಿತಿ ನೀಡಲು ಸಿದ್ಧತೆ ನಡೆಸಿವೆ.  ಇದುವರೆಗೆ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾತ್ರ ಮಾಹಿತಿಯನ್ನು ನೀಡುತ್ತಿತ್ತು. ಕೃಷಿ ಇಲಾಖೆ ಮೂಲಕ ರೈತರ ಮೊಬೈಲ್‍ಗೆ ಎಸ್‍ಎಂಎಸ್ ಸಂದೇಶಗಳನ್ನು ಕಳುಹಿಸುತ್ತಿತ್ತು.   ಮಳೆ ಮುನ್ಸೂಚನೆ ಮತ್ತಿತರ ವಿವರಗಳನ್ನು ರೈತರಿಗೆ ಕಾಲಕಾಲಕ್ಕೆ ನೀಡುತ್ತಾ ಬಂದಿತ್ತು. ಈಗ ಹವಮಾನ ಇಲಾಖೆ ಮತ್ತು ಉಸ್ತುವಾರಿ ಕೇಂದ್ರಗಳೆರಡೂ ಜಂಟಿಯಾಗಿ ಮಾಹಿತಿ ನೀಡಲು ಮುಂದಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin