ಸೇತುವೆಯಿಂದ ಟ್ರಕ್ ಕೆಳಗುರುಳಿ 14 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Truck-Accidnt

ಇಥಾ, ಉತ್ತರಪ್ರದೇಶ, ಮೇ 5- ಮಿನಿ ಟ್ರಕ್ಕೊಂದು ಸೇತುವೆಯಿಂದ ಉರುಳಿ ಬಿದ್ದು, ಮದುವೆ ದಿಬ್ಬಣದ 14 ಮಂದಿ ಸಾವಿಗೀಡಾಗಿ 28 ಜನ ತೀವ್ರ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಇಥಾ ಜಿಲ್ಲೆಯಲ್ಲಿ ನಿನ್ನೆ ತಡ ರಾತ್ರಿ ಸಂಭವಿಸಿದೆ. ಉತ್ತರಪ್ರದೇಶದ ಪಶ್ಚಿಮ ಭಾಗದ ಸಕ್ರೋಲಿಯಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಪ್ರಯಾಣಿಕರು ಮಿನಿ ಟ್ರಕ್‍ನಲ್ಲಿ ಆಗ್ರಾಕ್ಕೆ ಹಿಂದಿರುಗುತ್ತಿದ್ದರು. ಚಾಲಕ ನಿದ್ದೆಯ ಮಂಪರಿನಲ್ಲಿದ್ದಾಗ ಟ್ರಕ್ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಅಪ್ಪಳಿಸಿ ಚಿಕ್ಕ ಅಣೆಕಟ್ಟಿಗೆ ಉರುಳಿ ಬಿದ್ದಿತು. ಈ ದುರ್ಘಟನೆಯಲ್ಲಿ 14 ಮಂದಿ ಮೃತಪಟ್ಟು, 28 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಗಾಯಾಳುಗಳಿಗೆ ಸ್ಥಳೀಯ ಮತ್ತು ಅಗ್ರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.   ಉನ್ನತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಥಾ ಜಿಲ್ಲಾ ದಂಡಾಧಿಕಾರಿ ಅಮಿತ್ ಕಿಶೋರ್ ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

lick Here to Download  :  Android / iOS  

Facebook Comments

Sri Raghav

Admin